ಅಡಿಕೆ ಬೆಳೆಗಾರರಿಗೆ ಬಂಪರ್ : ಕ್ವಿಂಟಾಲ್ ಗೆ 2 ಸಾವಿರ ರೂ. ಹೆಚ್ಚಳ!!

ಶಿವಮೊಗ್ಗ : 

      ಅಡಿಕೆ ಬೆಲೆ ಒಂದೇ ವಾರದಲ್ಲಿ 2 ಸಾವಿರ ರೂ. ಏರಿಕೆಯಾಗಿದ್ದು, ಇದರಿಂದಾಗಿ ಅಡಿಕೆ ಬೆಳೆಗಾರರಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಂತಾಗಿದೆ.

      ನೆರೆ – ಬರ ಹಾಗೂ ರೋಗಬಾಧೆಯಿಂದ ಅಡಿಕೆ ಇಳುವರಿ ಕುಂಠಿತವಾಗಿದ್ದು, ಮಾರುಕಟ್ಟೆಗೆ ಅಡಿಕೆ ಕಡಿಮೆ ಪ್ರಮಾಣದಲ್ಲಿ ಬರುತ್ತಿರುವ ಕಾರಣ ಅಡಿಕೆ ದರ ಏರಿಕೆ ಆಗಲು ಕಾರಣ ಎನ್ನಲಾಗಿದ್ದು, ಕಳೆದ ಮೂರು ವರ್ಷಗಳಿಂದ 30 ಸಾವಿರ ರೂ.ನಿಂದ 35 ಸಾವಿರ ರೂ.ಗೆ ಇದ್ದ ಅಡಿಕೆ ದರ ಇದೀಗ 2 ಸಾವಿರ ರೂ. ಏರಿಕೆಯಾಗಿ 37 ಸಾವಿರ ಗಡಿ ದಾಟಿದೆ. ಶೀಘ್ರದಲ್ಲೇ 40 ಸಾವಿರ ರೂ. ಗಡಿ ದಾಟುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

     ರಾಜ್ಯದಲ್ಲಿ ಸುಮಾರು 4 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತಿದ್ದು, ಈ ಸಲ ಇಳುವರಿ ಕಡಿಮೆಯಾಗಿರುವುದರಿಂದ ಉತ್ತಮ ಧಾರಣೆ ಬಂದಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link