ಕೋಲಾರ :
ಖಾಸಗಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಗೆ ಬೆಂಕಿ ಹತ್ತಿಕೊಂಡು ಸವಾರ ಸ್ಥಳದಲ್ಲೇ ಸಜೀವ ದಹನಗೊಂಡು ಸಾವಿಗೀಡಾದ ಘಟನೆ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆಯ ಹೊರವಲಯದಲ್ಲಿ ಘಟನೆ ನಡೆದಿದ್ದು, ಅಪಘಾತ ನಂತರ ಬೈಕ್ ಹೊತ್ತಿ ಉರಿದಿದ್ದು, ಬೈಕ್ ಸವಾರ ಸುಟ್ಟು ಕರಕಲಾಗಿದ್ದಾನೆ. ಬೈಕ್ ಸವಾರನನ್ನು ಬಂಗಾರಪೇಟೆಯ ವಿವೇಕಾನಂದ ನಗರದ ಯುವಕ ನೀರಜ್ (20) ಎಂದು ಗುರುತಿಸಲಾಗಿದೆ. ಬೈಕ್‍ನಲ್ಲಿದ್ದ ಇನ್ನೋರ್ವ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮೃತ ನೀರಜ್ ಗೆಳೆಯರೊಂದಿಗೆ ಜಾಲಿ ರೇಡ್ ಮಾಡುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅತಿ ವೇಗದಲ್ಲಿ ಬಂದು ಬೈಕ್ ಗುದ್ದಿದ ಪರಿಣಾಮ ಸವಾರನ ಯಮಹಾ ಬೈಕ್ ಸಂಪೂರ್ಣ ಸುಟ್ಟುಹೋಗಿದೆ. ನೀರಜ್ ತಪ್ಪಿಸಿಕೊಳ್ಳಲಾಗದೆ ಅಲ್ಲೇ ಸುತ್ತು ಕಾರಕಳಾಗಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಸುಟ್ಟು ಕರಕಲಾದ ಆತನ ದೇಹವನ್ನು ನೋಡಿ ಸ್ಥಳೀಯರು ಭಯಭೀತರಾಗಿದ್ದಾರೆ. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
