ಪಿಪಿಇ ಕಿಟ್ ಮಾದರಿಯ ಕವಚ ಧರಿಸಿದ ಬಸ್ ಕಂಡಕ್ಟರ್!!

ಮಂಗಳೂರು:

     ಲಾಕ್ಡೌನ್ ಸಡಿಲಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳ ಸಂಚಾರ ಆರಂಭಗೊಂಡಿದೆ.

      ಈ ಮಧ್ಯೆ ಸೋಂಕು ತಗುಲದಂತೆ ಅಗತ್ಯ ಮುಂಜಾಗ್ರತೆ ವಹಿಸಿರುವ ಖಾಸಗಿ ಬಸ್ ಗಳ ನಿವಾ೯ಹಕರು , ಇದೀಗ ಪಿಪಿಇ ಕಿಟ್ ಮಾದರಿಯ ರಕ್ಷಾ ಕವಚ ಧರಿಸಲು ಮುಂದಾಗಿದ್ದಾರೆ.

      ಮಂಗಳೂರು ನಗರದ ಕೆಲವು ರೂಟ್ ಗಳ ಸಿಟಿ ಬಸ್ ಗಳಲ್ಲಿ ನಿವಾ೯ಹಕರು ಪಿಪಿಇ ಕಿಟ್ ಮಾದರಿ ರಕ್ಷಾ ಕವಚ ಧರಿಸಿ ಕತ೯ವ್ಯ ನಿವ೯ಹಿಸಲು ಆರಂಭಿಸಿದ್ದಾರೆ.

      ಕೊರೋನಾ ಸೋಂಕು ಹರಡದಂತೆ ರಕ್ಷಣಾ ಕವಚ ಧರಿಸಿ ಕೆಲಸ ಮಾಡುತ್ತಿರುವುದು ಸಾವ೯ಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap