ಚಿಕ್ಕಮಗಳೂರು:
ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದು ಕೊರೊನಾ ಚಿಕಿತ್ಸೆಗೆ ₹9 ಲಕ್ಷ ಬಿಲ್ ಮಾಡಿ, ಅದರ ಮೇಲೆ 1 ರೂಪಾಯಿ ರಿಯಾಯಿತಿ ನೀಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ರಾಜ್ಯಾದ್ಯಂತ ಪ್ರಸ್ತುತ 1.3 ಲಕ್ಷ ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯಲು ದುಬಾರಿ ವೆಚ್ಚ ಭರಿಸಲಾಗದೆ ಅನೇಕರು ಪರದಾಡುತ್ತಿದ್ದಾರೆ.
ಈ ನಡುವೆಕೊರೊನಾದಿಂದ ಮೃತಪಟ್ಟಿರೋ ಕುಟುಂಬಕ್ಕೆ ಖಾಸಗಿ ಆಸ್ಪತ್ರೆಯ ಬಿಲ್ ನೋಡಿ ಶಾಕ್ ಆಗಿದೆ. ಕೊರೊನಾದಿಂದ ಮೃತಪಟ್ಟ ವ್ಯಕ್ತಿಗೆ 9,25,601 ರೂ. ಬೀಲ್ ನೀಡಲಾಗಿತ್ತು. ಬಳಿಕ ಒಟ್ಟು ಬಿಲ್ ಮೊತ್ತದಲ್ಲಿ ಆಸ್ಪತ್ರೆ 1 ರೂ. ವಿನಾಯಿತಿ ನೀಡಿದೆ. ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಮೃತರ ಕುಟುಂದವರು ಆಸ್ಪತ್ರೆ ನೀಡಿದ ₹9,25,601 ಬಿಲ್ ನೋಡಿ ಶಾಕ್ ಆಗಿದ್ದು, ಬಳಿಕ ಪೂರ್ತಿ ಬಿಲ್ ಕಟ್ಟಿದ್ದಾರೆ. ಈ ವೇಳೆ ಆಸ್ಪತ್ರೆ 1 ರೂಪಾಯಿ ರಿಯಾಯಿತಿ ನೀಡಿದೆ. ಬಿಲ್ ನೋಡಿ ಸಾರ್ವಜನಿಕರು ಅಸಮಧಾನ ವ್ಯಕ್ತ ಪಡಿಸಿದ್ದಾರೆ.
ಭಾರೀ ಬಿಲ್ ಕಟ್ಟಿ ಕಂಗಾಲಾಗಿರೋ ಮೃತರ ಕುಟುಂಬದವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ರಾಜ್ಯ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಆಸ್ಪತ್ರೆಯವರು ಹೆಚ್ಚಿನ ಹಣ ವಸೂಲಿ ಮಾಡಿದ್ದಾರೆ. ಹೀಗಾಗಿ ಸೂಕ್ತ ಕ್ರಮ ಕೈಗೊಂಡು, ಹೆಚ್ಚುವರಿ ಹಣವನ್ನ ಹಿಂದಿರುಗಿಸುವಂತೆ ಆಸ್ಪತ್ರೆಯ ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ