ಇಂಗ್ಲೀಷ್ ನಲ್ಲಿ ಪ್ರಮಾಣವಚನ ಸ್ವೀಕಾರ : ಸಂಸದ ಸುರೇಶ್ ಅಂಗಡಿ ವಿರುದ್ಧ ಪ್ರತಿಭಟನೆ!!!

ಬೆಳಗಾವಿ :

       ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಕನ್ನಡವನ್ನು ಕಡೆಗಣಿಸಿ ಇಂಗ್ಲೀಷಿಗೆ ಮಣೆಹಾಕಿದ ಕೇಂದ್ರ ರೈಲು ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ವಿರುದ್ಧ ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ತೀವ್ರ ಪ್ರತಿಭಟನೆ ನಡೆಸಿ ಅಂಗಡಿಯವರ ಪ್ರತಿಕೃತಿಯನ್ನು ದಹಿಸಿದರು.

      ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ಧರಣಿ ನಡೆಸಿದ ಕರವೇ ಕಾರ್ಯಕರ್ತರು ಅಂಗಡಿಯವರ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೇ ಪ್ರತಿಕೃತಿಯನ್ನು ದಹಿಸಿದರು.

      ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ,ಯುವ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ,ಗಣೇಶ ರೋಖಡೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related image

      ಮೇ 23 ಕ್ಕೆ ಲೋಕಸಭೆಗೆ ನಾಲ್ಕನೇ ಬಾರಿ ಆಯ್ಕೆಗೊಂಡ ಸುರೇಶ ಅಂಗಡಿ ಅವರು ಮೇ 30 ರಂದು ರೈಲು ಖಾತೆಯ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.ಜೂನ್ 17 ರಂದು ಸಂಸದರಾಗಿ ಇಂಗ್ಲೀಷಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದ 28 ರ ಪೈಕಿ 27 ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದು ಈ ಪೈಕಿ ಅಂಗಡಿಯವರೊಬ್ಬರೇ ಇಂಗ್ಲೀಷಿನಲ್ಲಿ ಸ್ವೀಕರಿಸಿದರು. 25 ಸದಸ್ಯರು ಕನ್ನಡದಲ್ಲಿ ಹಾಗೂ ಒಬ್ಬರು ಸಂಸ್ಕೃತದಲ್ಲಿ ಸ್ವೀಕರಿಸಿದ್ದಾರೆ.

      ಸುರೇಶ ಅಂಗಡಿಯವರ ” ಮರಾಠಿಗರ ಓಲೈಕೆ” ರಾಜಕಾರಣ ಕನ್ನಡ ಸಂಘ ಸಂಸ್ಥೆಗಳ ಆಕ್ರೋಶಕ್ಕೆ ಕಾರಣವಾಗಿದ್ದು ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಕಟು ಟೀಕೆಗಳು ವ್ಯಕ್ತವಾಗಿವೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link