ಬೆಂಗಳೂರು :
ನಗರದಲ್ಲಿ ಮತ್ತೆ ಗುಂಡಿನ ಸದ್ದು ಮಾಡಿದ್ದು, ಡುಯಟ್ ಲೇಡೀಸ್ ಬಾರ್ ಮಾಲೀಕ ಮನೀಶ್ ಶೆಟ್ಟಿಯನ್ನು ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದೆ.
ರೆಸ್ಟ್ ಹೌಸ್ ರಸ್ತೆಯಲ್ಲಿರುವ ತಮ್ಮ ಬಾರ್ ಮುಂದೆ ರಾತ್ರಿ ಸುಮಾರು 9. 05 ಸುಮಾರಿಗೆ ನಿಂತಿದ್ದ 45 ವರ್ಷ ವಯಸ್ಸಿನ ಮನೀಶ್ ಶೆಟ್ಟಿ ಅವರ ಮೇಲೆ ಬೈಕಿನಿಂದ ಬಂದ ಅನಾಮಿಕ ವ್ಯಕ್ತಿಗಳು ಮೊದಲಿಗೆ ಮನೀಶ್ ಶೆಟ್ಟಿ ಅವರಿಗೆ ಚಾಕುವಿನಿಂದ ತಿವಿದಿದ್ದಾರೆ ನಂತರ ಡಬ್ಬಲ್ ಬ್ಯಾರೆಲ್ ಗನ್ ಬಳಸಿ ಎರಡು ಸುತ್ತು ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದಾರೆ.
ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮನೀಶ್ ರನ್ನು ತಕ್ಷಣವೇ ಸಮೀಪದ ಮಲ್ಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಯತ್ನಿಸಲಾಗಿದೆ. ಆದರೆ, ಪಾಯಿಂಟ್ ಬ್ಲ್ಯಾಂಕ್ ನಲ್ಲಿ ತಗುಲಿದ್ದ ಗುಂಡು ಮನೀಶ್ ಪ್ರಾಣ ತೆಗೆದಿದೆ.
ಚಿಕ್ಕಮಗಳೂರಿನ ಕೊಪ್ಪ ಮೂಲದ ಮನೀಶ್ ಶೆಟ್ಟಿಗೆ ಭೂಗತ ಜಗತ್ತಿನ ನಂಟಿತ್ತು. ಮಂಗಳೂರು, ಬಾಂಬೆಯಲ್ಲಿ ಇವರ ವಿರುದ್ಧ ಹಲವು ಪ್ರಕರಣಗಳು ಇವೆ. ಅಂಡರ್ವರ್ಲ್ಡ್ ಡಾನ್ಗಳಾಗಿದ್ದ ಬನ್ನಂಜೆ ರಾಜ, ರವಿ ಪೂಜಾರಿ ಅವರ ಆಪ್ತನಾಗಿಯೂ ಗುರುತಿಸಿಕೊಂಡಿದ್ದ. ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸಿದ್ದ ಬಾಣಸವಾಡಿಯ ಚೆಮ್ಮನೂರು ಜುವೆಲರಿ ಮಳಿಗೆಯ ರಾಬರಿ ಪ್ರಕರಣದಲ್ಲಿ ಮನೀಶ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
