ಮಂಡ್ಯ:
ಕೊವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಬಳಿಕ ಅಸ್ಥಿ ಪಡೆಯಲು ಸಂಬಂಧಿಕರು ಬಾರದ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಮುಕ್ತಿ ಕಾರ್ಯ ನಡೆಸಿಕೊಡಲಾಗಿದೆ.
ಸಾಮಾನ್ಯವಾಗಿ ಮೃತರ ಅಂತ್ಯಸಂಸ್ಕಾರದ ನಂತರದಲ್ಲಿ ಅಸ್ಥಿಯನ್ನು ಹರಿಯುವ ನದಿಯಲ್ಲಿ ವಿಸರ್ಜಿಸಿದರೆ ಮೃತ ಆತ್ಮಕ್ಕೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಸರ್ಕಾರದ ವತಿಯಿಂದಲೇ ಕಂದಾಯ ಸಚಿವ ಆರ್ ಅಶೋಕ್ ಅಸ್ಥಿ ವಿಸರ್ಜಿಸಿದ್ದಾರೆ.
ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ಕಾರ್ಯಗಳನ್ನು ನಡೆದಿದ್ದು, 12ಕ್ಕೂ ಹೆಚ್ಚು ಪುರೋಹಿತರಿಂದ ಕೊವಿಡ್ ಮೃತರಿಗೆ ಶ್ರದ್ಧಾ ಕಾರ್ಯ ನೆರವೇರಿದೆ. ಕರ್ನಾಟಕ ಸರ್ಕಾರದ ಪರವಾಗಿ ಸಚಿವ ಆರ್. ಅಶೋಕ್ ಸಂಕಲ್ಪಕ್ಕೆ ಕುಳಿತು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಚಿತಾಭಸ್ಮ ತೆಗೆದುಕೊಂಡು ಹೋಗದ ಸಂಬಂಧಿಕರು:
ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಚಿತಾಭಸ್ಮವನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಸಂಬಂಧಿಕರಿಗೆ 15 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಸಾಮಾನ್ಯವಾಗಿ ಮೃತರ ಅಂತ್ಯಕ್ರಿಯೆ ನಡೆದ ದಿನ ಅಥವಾ ಮರುದಿನವೇ ಚಿತಾಭಸ್ಮವನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಕೆಲವು ಪ್ರಕರಣಗಳಲ್ಲಿ ಸಂಬಂಧಿಕರು ಅಸ್ಥಿಯನ್ನು ತೆಗೆದುಕೊಂಡು ಹೋಗುವುದಕ್ಕೂ ಹಿಂದೇಟು ಹಾಕಿದ್ದರು.
ಹೀಗಾಗಿ 1200 ಮೃತರ ಚಿತಾಭಸ್ಮವನ್ನು ಹಾಗೇ ಶೇಖರಿಸಿ ಇಡಲಾಗಿತ್ತು. ಇಂದು ಮೃತರ ಆತ್ಮಕ್ಕೆ ಮುಕ್ತಿ ದೊರಕಿಸುವ ಉದ್ದೇಶದಿಂದ ಸರ್ಕಾರವೇ ಅಸ್ಥಿ ವಿಸರ್ಜನೆಗೆ ಮುಂದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/06/R-ashok.jpg)