ಕಾರವಾರ :
ರಫೆಲ್ ಅಂದ್ರೆ ಏನು ಎನ್ನುವುದು ರಾಹುಲ್ ಗಾಂಧಿಗೆ ದೇವರಾಣೆ ಗೊತ್ತಿಲ್ಲ. ಅವರು ಅದನ್ನು ಮೂರು ಚಕ್ರದ ಸೈಕಲ್ ಅಂದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.
ಹೊನ್ನಾವರದ ನಗರ ಬಸ್ತಿಕೇರಿಯಯಲ್ಲಿ ನಡೆದ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಫೆಲ್ ಗೆ ಮೂರು ಚಕ್ರ ಇದೆ. ರಾಹುಲ್ ಸಣ್ಣವರಿದ್ದಾಗ ಆಡಿದ್ದ ಸೈಕಲ್ ಗೂ ಮೂರು ಚಕ್ರ ಇತ್ತು. ಹೀಗಾಗಿ, ಅದೇ ಸೈಕಲ್ ಅನ್ನು ಅವರು ರಫೆಲ್ ಅಂದುಕೊಂಡಿದ್ದಾರ. ಅವರ ಟೀಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರತಿಕ್ರಿಯಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮಹಾಘಟ ಬಂಧನ್ ವಿಫಲವಾಗಲಿದೆ. ಮಹಾಘಟಬಂಧನ್ ಎನ್ನುವುದು ವಿರೋಧಿ ಪಕ್ಷಗಳ ಸಾಮೂಹಿಕ ಆತ್ಮಹತ್ಯೆ ಯತ್ನ ಎಂದು ಟೀಕಿಸಿದರು. ಲೋಕಸಭೆಯಲ್ಲಿ ವಿರೋಧ ಪಕ್ಷವೇ ಇಲ್ಲದ ರೀತಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
