ಬೆಂಗಳೂರು :
ಅ. 21 ರಿಂದ ನವೆಂಬರ್ 10 ರವರೆಗೆ ಪ್ಲಾಟ್ ಫಾರಂ ಟಿಕೆಟ್ ದರವನ್ನು 10 ರೂ. ನಿಂದ 50 ರೂ.ಗೆ ಹೆಚ್ಚಿಸಲಾಗಿದೆ.
ಹೌದು, ಈ ಹಿಂದೆ 3 ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ ಫಾರಂ ಟಿಕೆಟ್ ಶುಲ್ಕವನ್ನು ಹೆಚ್ಚಳ ಮಾಡಿದ ಒಂದು ತಿಂಗಳ ನಂತರ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ 11 ರೈಲು ನಿಲ್ದಾಣಗಳಲ್ಲಿ ಇಂದಿನಿಂದ ಪ್ಲಾಟ್ ಫಾರಂ ಟಿಕೆಟ್ ದರ ಹೆಚ್ಚಳ ಮಾಡಿದೆ.
ಅನಗತ್ಯವಾಗಿ ರೈಲು ನಿಲ್ದಾಣಕ್ಕೆ ಪ್ರವೇಶ ನಿರ್ಬಂಧಿಸುವ ಉದ್ದೇಶದಿಂದ ಪ್ಲಾಟ್ ಫಾರ್ಮ್ ಟಿಕೆಟ್ ಶುಲ್ಕ ಹೆಚ್ಚಳ ಮಾಡಲಾಗಿದೆ ಎನ್ನಲಾಗಿದೆ.
ಕೆಆರ್ ಪುರಂ, ಬಂಗಾರಪೇಟೆ, ತುಮಕೂರು, ಹೊಸೂರು, ಧರ್ಮಪುರಿ, ಕೆಂಗೇರಿ, ಮಂಡ್ಯ, ಹಿಂದೂಪುರ, ಪೆನುಕೊಂಡ, ಯಲಹಂಕ, ಬಾಣಸವಾಡಿ, ಕಾರ್ಮೆಲರಂ ಮತ್ತು ವೈಟ್ ಫೀಲ್ಡ್ ರೈಲು ನಿಲ್ದಾಣಗಳಲ್ಲಿ ಅಕ್ಟೋಬರ್ 21 ರಿಂದ ನವಂಬರ್ 10 ರವರೆಗೆ 50 ರೂ. ಪ್ಲಾಟ್ ಫಾರಂ ಟಿಕೆಟ್ ಶುಲ್ಕವಿರುತ್ತದೆ ಎಂದು ಹೇಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ