ಬೆಂಗಳೂರು : ರೈಲ್ವೆ ಫ್ಲಾಟ್‌ ಫಾರಂ ಟಿಕೆಟ್ 10 ರಿಂದ 50 ರೂ.ಗೆ ಏರಿಕೆ!!

ಬೆಂಗಳೂರು :

Bangalore East railway station - Wikipedia

      ನಗರದ ಮೂರು ರೈಲು ನಿಲ್ದಾಣಗಳಲ್ಲಿನ ಫ್ಲಾಟ್ ಫಾರಂ ಟಿಕೆಟ್ ದರವನ್ನು 10 ರಿಂದ 50 ರೂ.ಗೆ ಏರಿಕೆ ಮಾಡಲಾಗಿದೆ.

      ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಶವಂತಪುರ ಮತ್ತು ಬೆಂಗಳೂರು ಕಂಟೈನ್ಮೆಂಟ್ ರೈಲು ನಿಲ್ದಾಣಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ಲಾಟ್ ಫಾರಂ ಟಿಕೆಟ್ ಬೆಲೆ 50 ರೂ.ಗೆ ಏರಿಕೆ ಮಾಡಲಾಗಿದೆ.

     ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಜನರ ದಟ್ಟಣೆ ಕಡಿಮೆ ಮಾಡಲು ಫ್ಲಾಟ್ ಫಾರಂ ದರವನ್ನು ಏರಿಕೆ ಮಾಡಲಾಗಿದೆ.  ಈ ಹೆಚ್ಚಳ ತಾತ್ಕಾಲಿಕವಾಗಿದ್ದು, ಮುಂದಿನ ಆದೇಶದ ತನಕ ಜಾರಿಯಲ್ಲಿರಲಿದೆ ಎಂದು ರೈಲ್ವೆ ಹೇಳಿದೆ.

    ಭಾರತೀಯ ರೈಲ್ವೆಯ ಬೆಂಗಳೂರು ವಿಭಾಗ 7 ರೈಲುಗಳ ಸಂಚಾರವನ್ನು ಶುಕ್ರವಾರದಿಂದ ಆರಂಭಿಸಲಿದೆ. ಈಗಾಗಲೇ ಸಂಚಾರ ನಡೆಸುತ್ತಿರುವ ರೈಲುಗಳ ಜೊತೆ ಹೆಚ್ಚುವರಿಯಾಗಿ 7 ರೈಲು ಸಂಚಾರ ನಡೆಸಲಿದೆ. ಈ ಸಂದರ್ಭದಲ್ಲಿ ನಿಲ್ದಾಣದಲ್ಲಿ ಜನರ ದಟ್ಟಣೆ ಉಂಟಾಗುವ ನಿರೀಕ್ಷೆ ಇದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap