ಅಯೋಧ್ಯೆ :
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಆರಂಭವಾದ ಮೂರೇ ದಿನಗಳಲ್ಲಿ ಅಂದಾಜು 100 ಕೋಟಿ ರೂ. ಹಣ ಸಂಗ್ರಹವಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಈ ಕುರಿತು ಮಾಹಿತಿ ನೀಡಿದ್ದು, ‘ದೇಶದ ವಿವಿಧೆಡೆ ಸಂಗ್ರಹವಾದ ಹಣ ಇನ್ನೂ ಪೂರ್ಣ ಪ್ರಮಾಣದಲ್ಲಿ ಟ್ರಸ್ಟ್‌ನ ಕೇಂದ್ರ ಕಚೇರಿ ತಲುಪಿಲ್ಲ. ಆದರೆ ನಮ್ಮ ಕಾರ್ಯಕರ್ತರು ನೀಡಿರುವ ಮಾಹಿತಿ ಅನ್ವಯ ಈವರೆಗೆ 100 ಕೋಟಿ ರು. ಆಸುಪಾಸಿನಷ್ಟುಹಣ ಸಂಗ್ರಹವಾಗಿದೆ’ ಎಂದಿದ್ದಾರೆ.
ಸಂಪೂರ್ಣವಾಗಿ ಭಕ್ತರ ದೇಣಿಗೆ ಹಣದಿಂದಲೇ ರಾಮಮಂದಿರ ದೇಗುಲ ಮತ್ತು ದೇಗುಲ ಸಂಕೀರ್ಣವನ್ನು ನಿರ್ಮಿಸುವ ಉದ್ದೇಶವನ್ನು ಟ್ರಸ್ಟ್ ಹೊಂದಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡುವ ಅಭಿಯಾನಕ್ಕೆ ಸಂಕ್ರಾತಿ ದಿನವಾದ ಜ.14 ರಿಂದ ದೇಶಾದ್ಯಂತ ಚಾಲನೆ ನೀಡಲಾಗಿತ್ತು. ಈ ಅಭಿಯಾನ ಫೆ.27 ವರೆಗೆ ನಡೆಯಲಿದೆ.
ರಾಮಮಂದಿರಕ್ಕೆ 300-400 ಕೋಟಿ ರು. ಮತ್ತು ಒಟ್ಟಾರೆ ರಾಮಮಂದಿರ ಸಂಕೀರ್ಣಕ್ಕೆ 1100 ಕೋಟಿ ರು. ವೆಚ್ಚವಾಗುವ ಸಾಧ್ಯತೆ ಇದೆ ಎಂದು ಟ್ರಸ್ಟ್ ಅಂದಾಜಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ