ಬೆಂಗಳೂರು:
ಮುಸ್ಲಿಮರ ಪವಿತ್ರ ರಂಜಾನ್ ಹಬ್ಬದ ಒಂದು ತಿಂಗಳ ಉಪವಾಸ ವ್ರತದ ಆಚರಣೆ ರಾಜ್ಯದ್ಯಂತ ನಾಳೆಯಿಂದ ಆರಂಭಗೊಳ್ಳಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಭಾನುವಾರದಂದು ಬೆಂಗಳೂರಿನ ವಕ್ಫ್ ಬೋರ್ಡ್ ಕಚೇರಿಯಲ್ಲಿ ನಡೆದ ರಾಜ್ಯ ಚಂದ್ರದರ್ಶನ ಸಮಿತಿ ಸಭೆ ಬಳಿಕ ಸಚಿವ ಜಮೀರ್ ಅಹ್ಮದ್ ಈ ವಿಷಯ ತಿಳಿಸಿದ್ದು, ಕರಾವಳಿ ಹೊರತುಪಡಿಸಿ ಇತರ ಭಾಗಗಳಲ್ಲಿ ಚಂದ್ರ ದರ್ಶನವಾದ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಮಂಗಳವಾರದಿಂದ ಉಪವಾಸ ಆಚರಿಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಆದರೆ ಕರಾವಳಿ ಜಿಲ್ಲೆಗಳಲ್ಲಿ ರಮ್ಜಾನ್ ತಿಂಗಳ ಚಂದ್ರ ದರ್ಶನ ಭಾನುವಾರವೇ(ಮೇ.5) ಆಗಿರುವುದರಿಂದ ಮೇ 6 ರಿಂದ ಮುಸ್ಲೀಮರು ಒಂದು ತಿಂಗಳ ಉಪವಾಸ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯರ್ ಘೋಷಿಸಿದ್ದಾರೆ. ಸೌದಿ ಅರೇಬಿಯಾ ಹಾಗೂ ದುಬೈನಲ್ಲೂ ಸಹ ಸೋಮವಾರದಿಂದಲೇ ಉಪವಾಸ ಆಚರಣೆ ಆರಂಭವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ