ಬೆಂಗಳೂರು:
ಸಂಪುಟ ಪುನಾರಚನೆ ವೇಳೆ ರಾಮಲಿಂಗರೆಡ್ಡಿಯವರಿಗೆ ಅವಕಾಶ ನೀಡಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ” ದಿವಂಗತ ಶಿವಳ್ಳಿಯವರ ನಿಧನದಿಂದ ತೆರವಾಗಿರುವ ಸಚಿವ ಸ್ಥಾನವನ್ನು ರಾಮಲಿಂಗಾರೆಡ್ಡಿ ಅವರಿಗೆ ನೀಡಲಾಗುತ್ತದೆ. ಸಂಪುಟ ಪುನರ್ ರಚನೆ ವೇಳೆ ರಾಮಲಿಂಗಾರೆಡ್ಡಿ ಅವರಿಗೆ ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದೆ. ಈ ಬಗ್ಗೆ ರಾಮಲಿಂಗಾರೆಡ್ಡಿ ಜೊತೆ ನಾನೇ ಮಾತನಾಡುತ್ತೇನೆ” ಎಂದು ಹೇಳಿದ್ದಾರೆ.
” ಕಾಂಗ್ರೆಸ್ನಲ್ಲಿ ಮೂಲ, ವಲಸಿಗ ಭೇದಭಾವ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಜೊತೆಯಲ್ಲಿಯೇ ಇದ್ದೇವೆ. ವಿಶ್ವನಾಥ್, ರೋಷನ್ ಬೇಗ್ ಬಗ್ಗೆ ನಾನು ಮಾತಾಡಲ್ಲ. ವಿಶ್ವನಾಥ್ ನಮ್ಮ ಪಕ್ಷದವರೇ ಅಲ್ಲ, ನಾನು ಮಾತಾಡಲ್ಲ,” ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
