ಬೆಂಗಳೂರು :
ಮೈತ್ರಿ ಸರ್ಕಾರದಲ್ಲಿ ಸಚಿವರಾಗಿ ಡಿಕೆ ಶಿವಕುಮಾರ್ ಅನುಭವಿಸಿದ ಖಾತೆ ಮತ್ತು ಕೊಠಡಿಗಳಿಗೆ ರಮೇಶ್ ಜಾರಕಿಹೊಳಿ ಕಸರತ್ತು ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಹೌದು, ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ರಮೇಶ್ ಜಾರಕಿಹೊಳಿ ತಮಗೆ ಪ್ರಬಲ ಖಾತೆಯನ್ನು ನೀಡಿ ಎಂದು ಸಿಎಂ ಬಳಿ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದು, ಇಂಧನ ಖಾತೆ ಇವರಿಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಹಿಂದೆ ಡಿ.ಕೆ.ಶಿ. ಬಳಸುತ್ತಿದ್ದ 336-337 ಕೊಠಡಿಯನ್ನೇ ನೀಡಬೇಕು ಎಂದು ಮನವಿ ಮಾಡಿದ್ದಾರಂತೆ.
ಈ ಹಿಂದೆ ಬೆಳಗಾವಿಯ ಪಿ.ಎಲ್.ಡಿ. ಬ್ಯಾಂಕ್ ಚುನಾವಣೆ ವೇಳೆ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪ ಮಾಡಿದ್ದರು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಬೆಂಬಲವಾಗಿ ನಿಂತಿದ್ದ ಡಿ.ಕೆ ಶಿವಕುಮಾರ್ ನಡೆಗೆ ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದರು.
ಈ ಅಸಮಾಧಾನ ಸರ್ಕಾರ ಬೀಳುವ ಹಂತಕ್ಕೆ ಹೋಗಿ ಸಮ್ಮಿಶ್ರ ಸರ್ಕಾರ ಪತನವಾಯ್ತು. ಡಿ.ಕೆ.ಶಿವಕುಮಾರ್ ಮೇಲಿನ ಸಿಟ್ಟು ಜಾರಕಿಹೊಳಿಗೆ ಇನ್ನೂ ಕಡಿಮೆ ಆದಂತೆ ಕಾಣುತ್ತಿಲ್ಲ. ಹೀಗಾಗಿ ಡಿ.ಕೆ. ಸಚಿವರಾಗಿ ಇದ್ದಾಗ ನಿಭಾಯಿಸುತ್ತಿದ್ದ ಖಾತೆಯನ್ನೇ ನೀಡಬೇಕು. ಹಾಗೂ ಅವರು ಉಪಯೋಗಿಸಿದ್ದ ಕೊಠಡಿಯನ್ನೇ ನೀಡಬೇಕು ಎಂದು ಸಿಎಂ ಬಳಿ ಅವರು ಪಟ್ಟು ಹಿಡಿದಿದ್ದಾರಂತೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ