ಬೆಂಗಳೂರು :
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಖಾಸಗಿ ಹೋಟೆಲ್ ನಲ್ಲಿದ್ದ ಅತೃಪ್ತ ಶಾಸಕರ ಗುಂಪಿನಿಂದ ಎಸ್.ಟಿ. ಸೋಮಶೇಖರ್ ಅವರು ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ.
Rebel Karnataka Congress MLA ST Somashekar arrives in Bengaluru from Mumbai. Somashekhar is the Chairman of Bangalore Development Authority (BDA), a meeting of BDA is scheduled for today morning in Bengaluru. pic.twitter.com/Ka0bqvf3UL
— ANI (@ANI) July 10, 2019
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡಿಎ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ. ಇನ್ನು ನಾನು ಬೆಂಗಳೂರಿನಲ್ಲೇ ಇರುತ್ತೇನೆ. ಮತ್ತೆ ಮುಂಬೈಗೆ ತೆರಳುವುದಿಲ್ಲ. ನಾನು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ಸಲ್ಲಿಸಿದ್ದೇನೆ, ನಾನಿನ್ನು ಪಕ್ಷದಲ್ಲಿದ್ದೇನೆ, ಕಾಂಗ್ರೆಸ್ ಪಕ್ಷಕ್ಕೆ ನನ್ನ ಬೆಂಬಲ ಎಂದರು. ತಮ್ಮ ಮಾತಿಗೆ ಸೂಚ್ಯವಾಗಿ, ಮಾಧ್ಯಮ ಪ್ರತಿನಿಧಿಗಳಿಗೆ ತಮ್ಮ ಬಲಗೈ ಹಸ್ತವನ್ನು ತೋರಿಸಿದರು.
ನಗರದಲ್ಲಿ ನಡೆಯುವ ಬಿಡಿಎ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಶಾಸಕ, ಬಿಡಿಎ ನಿಗಮ ಮಂಡಳಿ ಅಧ್ಯಕ್ಷರೂ ಆಗಿರುವ ಎಸ್. ಟಿ. ಸೋಮಶೇಖರ್ ಅವರು ಮುಂಬೈ ವಿಮಾನ ನಿಲ್ದಾಣದಿಂದ ತಡರಾತ್ರಿ ನಗರಕ್ಕೆ ಆಗಮಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ