ಬೆಂಗಳೂರು :
ಈರುಳ್ಳಿ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಇದೀಗ ಒಣ ಮೆಣಸಿನಕಾಯಿ ದರ ಏರಿಕೆಯಾಗಿದೆ.
ಬ್ಯಾಡಗಿ ಮೆಣಸಿಕಾಯಿ ಬೆಲೆಯಲ್ಲಿ ತೀವ್ರ ಏರಿಕೆಯಾಗಿದ್ದು, ಗದಗದ ರೈತರು ತಂದಿದ್ದ ಬ್ಯಾಡಗಿ ಮೆಣಸಿಕಾಯಿ ಅಲ್ಲಿನ ಎಪಿಎಂಸಿಯಲ್ಲಿ ಒಂದು ಕ್ವಿಂಟಾಲ್ ಗೆ ಬರೋಬ್ಬರಿ 33,259 ರೂ.ಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.
ಇನ್ನು ಕಡ್ಡಿ ಮೆಣಸಿಕಾಯಿ ಪ್ರತಿ ಕ್ವಿಂಟಾಲ್ ಗೆ 18,609 ರೂ. ಮತ್ತು ಗುಂಟೂರು ತಳಿ 9,009 ರೂ.ಗೆ ಮಾರಾಟವಾಗಿವೆ. ಈ ಮೂಲಕ ಗ್ರಾಹಕರಿಗೆ ಅದರ ಬಿಸಿ ತಟ್ಟಲಿದೆ. ಇದರಿಂದಾಗಿ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ