ಬೆಂಗಳೂರು:
ಪಾದಚಾರಿಗೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನಿವೃತ್ತ ಉದ್ಯೋಗಿಯೊಬ್ಬರು ಮೃತಪಟ್ಟಿರುವ ಘಟನೆ ಎನ್ ಜಿಇ ಎಫ್ ಜಂಕ್ಷನ್ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.
ಹೆಚ್ ಎಎಲ್ ನ ನಿವೃತ್ತ ಉದ್ಯೋಗಿ ಸಂಪತ್ (69) ಮೃತ ದುರ್ದೈವಿ. ಮೃತರು ಸೋಮವಾರ ರಾತ್ರಿ 9.30ಕ್ಕೆ ಪತ್ನಿ ಚಿತ್ರವತಿ ಅವರೊಂದಿಗೆ ಎಸ್ ಡಿ ರಸ್ತೆಯ ಎಡಿಎ ಗೇಟ್ ಬಳಿಯಿಂದ ಬಿಇಎಮ್ ಎಲ್ ಜಂಕ್ಷನ್ ಮಾರ್ಗವಾಗಿ ಎನ್ ಜಿಇಎಫ್ ಜಂಕ್ಷನ್ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಎದುರಿನಿಂದ ಬಂದ ನಂಬರ್ ಪ್ಲೇಟ್ ಇಲ್ಲದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ಕೆಳಗೆ ಬಿದ್ದಿದ್ದು, ತಲೆ, ದೇಹದ ಭಾಗಗಳಲ್ಲಿ ಗಂಭೀರ ಗಾಯಗಳಾಗಿದ್ದ ಪರಿಣಾಮ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
ಘಟನೆಗೆ ಸಂಬಂಧಿಸಿದಂತೆ ಜೆಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
