ಹುಬ್ಬಳ್ಳಿ :
ಕಾನೂನು ಕಾಲೇಜಿನ ನಿವೃತ್ತ ಪ್ರೊಫೆಸರ್ವೊಬ್ಬರನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಪರಾರಿಯಾಗಿರುವ ಘಟನೆ ಲಿಂಗರಾಜ ನಗರದಲ್ಲಿ ನಡೆದಿದೆ.
ಇಂದು(ಶನಿವಾರ) ಬೆಳ್ಳಂಬೆಳಗ್ಗೆ ಹುಬ್ಬಳ್ಳಿಯ ಲಿಂಗರಾಜನಗರದ ಕಟ್ಟಿ ಮಂಗಳಮ್ಮ ದೇವಸ್ಥಾನ ಬಳಿಯ ನಿವಾಸದಲ್ಲಿ ನಿವೃತ್ತ ಪ್ರೊಫೆಸರ್ ನೆತ್ತರು ಹರಿದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಚಾಕುವಿನಿಂದ ಇರಿದು ನಿವೃತ್ತ ಪ್ರೊಫೆಸರ್ ಶಂಕ್ರಪ್ಪ ಮುಶನ್ನವರ ಕೊಲೆ ಮಾಡಲಾಗಿದೆ.
ಗದಗದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಶಂಕ್ರಪ್ಪ ಮುಶನ್ನವರ ಕೊಲೆಯಾದವರು. ಅವರು ಇತ್ತಿಚೀಗೆ ನಿವೃತ್ತಿ ಪಡೆದು ಹುಬ್ಬಳ್ಳಿಯಲ್ಲಿ ನೆಲೆಸಿದ್ದರು.
ಕೌಟುಂಬಿಕ ಕಲಹ ಹಿನ್ನೆಲೆ ಅಳಿಯನಿಂದಲೇ ಮಾವನ(ಶಂಕ್ರಪ್ಪ) ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ವಿದ್ಯಾನಗರ ಪೊಲೀಸರು, ಮೃತದೇಹವನ್ನು ಹುಬ್ಬಳ್ಳಿಯ ಕಿಮ್ಸ್ ಶವಾಗಾರಕ್ಕೆ ರವಾನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ