ಮಧುಗಿರಿ :
ಕಳ್ಳರು ಮನೆಗೆ ನುಗ್ಗಿ ವೃದ್ಧ ವ್ಯಕ್ತಿಯನ್ನು ಕೊಲೆಗೈದು ಹಣ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಮರಬಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಾಸಿ ಚೌಡಪ್ಪ (60) ಕೊಲೆಯಾದ ದುರ್ದೈವಿ. ಈತ ಹಣ ದೋಚಲು ಬಂದಿದ್ದ ಕಳ್ಳರನ್ನು ತಡೆಯಲು ಹೋದಾಗ ಕಳ್ಳರು ಆತನನ್ನು ಕೊಲೆಗೈದಿದ್ದಾರೆ. ಬಳಿಕ ಹಣ ದೋಚಿ ಪರಾರಿಯಾಗಿದ್ದಾರೆ.
ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ