ಮನವೊಲಿಕೆ ಯಶಸ್ವಿ ; ಖಾಸಗಿ ಶಾಲೆಗಳ ಆನ್​ಲೈನ್ ಕ್ಲಾಸ್​ ಮತ್ತೆ ಆರಂಭ!!

ಬೆಂಗಳೂರು : 

      ಅನುದಾನ ರಹಿತ ಖಾಸಗಿ ಶಾಲಾ ಒಕ್ಕೂಟ ರುಪ್ಸಾ ತನ್ನ ಬಂದ್ ವಾಪಸ್ ಪಡೆದಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಆನ್ ಲೈನ್ ತರಗತಿ ಆರಂಭವಾಗಿದೆ.

     ಶಿಕ್ಷಣ ಇಲಾಖೆ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಡಿಯಲ್ಲಿ ಬರುವ ಎಲ್ಲ ಶಾಲೆಗಳ ತರಗತಿಗಳನ್ನು ಸ್ಥಗಿತಗೊಳಿಸಿ, ಬಂದ್ ನಡೆಸಲಾಗಿತ್ತು. ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟದ ಶೈಕ್ಷಣಿಕ ಚಟುವಟಿಕೆ ಬಂದ್‌ ಹಿನ್ನೆಲೆಯಲ್ಲಿ ರುಪ್ಸಾ ಪದಾಧಿಕಾರಿಗಳ ಜೊತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿದ್ದು, ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಂದ್ ಮಾಡಿದ್ದ ಆನ್​ಲೈನ್‌ ಕ್ಲಾಸ್ ಇಂದಿನಿಂದ ಮತ್ತೆ ಆರಂಭವಾಗಲಿದೆ.

      ಈ ಬಗ್ಗೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾಹಿತಿ ನೀಡಿದ್ದು, ಇಂದಿನಿಂದ ರುಪ್ಸಾ ಅಡಿಯ ಖಾಸಗಿ ಶಾಲೆಯ ಆನ್​ಲೈನ್ ಕ್ಲಾಸ್ ಆರಂಭ ಮಾಡಲಾಗುವುದು. ಆದರೆ ಶೈಕ್ಷಣಿಕ ಚಟುವಟಿಕೆ ಬಂದ್ ಹಿಂಪಡೆದಿಲ್ಲ. ನಾಳೆ ಮತ್ತೊಮ್ಮೆ ಸಚಿವರ ಜೊತೆ ಸಭೆ ಬಳಿಕ ರುಪ್ಸಾ ಪದಾಧಿಕಾರಿಗಳ ಸಭೆ ಜರುಗಲಿದೆ. ನಂತರ ಈ ಬಗ್ಗೆ ಅಂತಿಮ ನಿರ್ಧಾರ ಘೋಷಣೆ ಮಾಡಲಾಗುವುದು ಎಂದಿದ್ದಾರೆ. ನಿನ್ನೆ ನಡೆದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೊತೆಗಿನ ಸಭೆಯಲ್ಲಿ ನಾವು ಹಾಜರಾಗಿದ್ದೆವು. ನಮ್ಮ 15 ಬೇಡಿಕೆಗಳಿಗೆ ಸರ್ಕಾರ ಉತ್ತಮವಾಗಿ ಸ್ಪಂದಿಸಿದೆ. ಎರಡು ಬೇಡಿಕೆಗಳಿಗೆ ಸಿಎಂ ಜೊತೆ ಚರ್ಚಿಸಬೇಕು ಎಂದು ಸಚಿವರು ಹೇಳಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಟೆಂಟ್ ಶಾಲೆಗಳ ನವೀಕರಣ ವಿಚಾರವಾಗಿ ಒಂದು ವರ್ಷದೊಳಗೆ ಶಾಲೆ ನಿರ್ಮಾಣಕ್ಕೆ ಅವಕಾಶ ಕೊಡಿ ಎಂದು‌ ಕೇಳಿದ್ದೇವೆ. ನಾಳೆ ಪದಾಧಿಕಾರಿಗಳ ಸಭೆ ಜರುಗಲಿದೆ. ಸಭೆ ಬಳಿಕ ಶಾಲೆ ಆರಂಭ ಕುರಿತು ನಿರ್ಧಾರ ಪ್ರಕಟಿಸಲಿದ್ದೇವೆ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap