ಬೆಂಗಳೂರು :
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಮಣಿಕಂಠನ ಭಕ್ತರಿಗೆ ಪೋಸ್ಟ್ ಮೂಲಕ ಪ್ರಸಾದವನ್ನು ಮನೆ ಬಾಗಿಲಿಗೆ ತಲುಪಿಸುವ ಹೊಸ ವ್ಯವಸ್ಥೆ ಶುರುವಾಗಿದೆ.
ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನಿಂದಾಗಿ ಇದೇ ಮೊದಲ ಬಾರಿಗೆ ದೇವಸ್ವಂ ಮಂಡಳಿ ಇಂತಹ ಕ್ರಮ ಕೈಗೊಂಡಿದ್ದು ಈಗಾಗಲೇ ಈ ಪ್ರಕ್ರಿಯೆ ನವೆಂಬರ್ 6ರಿಂದಲೇ ಆರಂಭಗೊಂಡಿದೆ. ಇಲ್ಲಿಯವರೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪ್ರಸಾದ ಪಡೆಯಲು ರಾಜ್ಯ ಸೇರಿದಂತೆ ವಿವಿಧ ರಾಜ್ಯ, ಹೊರ ರಾಜ್ಯದಿಂದ 11 ಸಾವಿರ ಭಕ್ತರು ಅರ್ಜಿಸಲ್ಲಿಸಿದ್ದರಂತೆ. ಇಂತಹ ಭಕ್ತರ ವಿಳಾಸಕ್ಕೆ ಸ್ವೀಟ್ ಪೋಸ್ಟ್ ಮೂಲಕ ಟ್ರಾವಂಕೂರು ದೇವಸ್ವಂ ಮಂಡಳಿ ಪ್ರಸಾದವನ್ನು ತಲುಪಿಸಿದೆ.
ಮಂಡಳಿ ಅಂಚೆ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಇದರ ಫ್ರತಿಫಲವಾಗಿ ಶಬರಿಮಲೆಯ ಅಯ್ಯಪ್ಪನ ಪ್ರಸಾದವು ಸ್ಪೀಡ್ ಪೋಸ್ಟ್ ಮೂಲಕ ಭಕ್ತರ ಮನೆ ಬಾಗಿಲಿಗೆ ತಲುಪುವಂತ ವ್ಯವಸ್ಥೆಯಾಗಿದೆ.
ಶಬರಿಮಲೆ ಅಯ್ಯಪ್ಪನ ಭಕ್ತರಿಗೆ ಪ್ರಸಾದ ತಲುಪಲು ಯಾವುದೇ ತೊಂದರೆಯಾಗದಂತೆ ಈ ಕ್ರಮವನ್ನು ಕೈಗೊಂಡಿದ್ದು, ಕೊರೋನಾ ಸೋಂಕಿನ ಸಂದರ್ಭದಲ್ಲೂ ಅಯ್ಯಪ್ಪನ ಪ್ರಸಾದವನ್ನು ಮನೆ ಬಾಗಿಲಿಗೆ ಪಡೆದಂತ ಭಕ್ತರಿಗೆ ಸಂತಸವನ್ನು ಉಂಟುಮಾಡಿದೆಯಂತೆ. ಈ ಮೂಲಕ ಶಬರಿಮಲೆ ಅಯ್ಯಪ್ಪನ ಪ್ರಸಾದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ