ಬೆಂಗಳೂರು :
ಸ್ಟಾಫ್ ನರ್ಸ್ ಗಳ ವೇತನವನ್ನು 30 ಸಾವಿರಕ್ಕೆ ರಾಜ್ಯ ಸರ್ಕಾರ ಹೆಚ್ಚಳ ಮಾಡುವ ಮೂಲಕ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ.
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಮತ್ತು ಶುಶ್ರೂಷೆ ಮಾಡುತ್ತಿರುವ ಆಯುಷ್ ಮತ್ತು ಯುನಾನಿ ವೈದ್ಯರು ಹಾಗೂ ನರ್ಸ್ಗಳು ತಮ್ಮ ಸಂಬಳ ಹೆಚ್ಚಿಸುವಂತೆ ಹಲವು ದಿನಗಳಿಂದ ಪ್ರತಿಭಟನೆ ನಡೆಸಿದ್ದರು. ಆಗ ಸರ್ಕಾರ ಸಂಬಳ ಹೆಚ್ಚಿಸುವುದಾಗಿ ಹೇಳಿ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿತ್ತು.
ಕೊಟ್ಟ ಭರವಸೆಯಂತೆ ಸರ್ಕಾರ ಇಂದು ಆಯುಷ್ ಮತ್ತು ಯುನಾನಿ ವೈದ್ಯರ ಹಾಗೂ ನರ್ಸ್ಗಳ ಸಂಬಳ ಹೆಚ್ಚಿಸಿದೆ. ಆಯುಷ್ ವೈದ್ಯರ ವೇತನವನ್ನು 48 ಸಾವಿರಕ್ಕೆ, ಎಂಬಿಬಿಎಸ್ ವೈದ್ಯರ ವೇತನವನ್ನು 80 ಸಾವಿರಕ್ಕೆ ಹಾಗೂ ಸ್ಟಾಫ್ ನರ್ಸ್ ಗಳ ವೇತನವನ್ನು15 ಸಾವಿರದಿಂದ 30 ಸಾವಿರಕ್ಕೆ ಏರಿಸಿ ಆದೇಶ ಹೊರಡಿಸಿದೆ. ಇದು ಆರು ತಿಂಗಳವರೆಗೆ ಮಾತ್ರವೇ ಆಗಿದೆ.
ಇದಕ್ಕಾಗಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖಾಂತರ 500 ಕೋಟಿ ರೂಪಾಯಿಗಳ ಅನುಮೋದನೆ ಮಾಡಿಸಲಾಗಿದೆ ಎಂದು ಸಚಿವ ಡಾ. ಸುಧಾಕರ್ ಹೇಳಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ