ಬೆಂಗಳೂರು:
ರಾಜ್ಯ ಸರ್ಕಾರ ಹೊಸ ವರ್ಷದ ಕೊಡುಗೆಯಾಗಿ ಐಎಎಸ್ ಅಧಿಕಾರಿಗಳಿಗೆ ಹೊಸ ವರ್ಷದ ಮುನ್ನಾ ದಿನ ಸರ್ಕಾರ ಬಡ್ತಿ ನೀಡಿ ಆದೇಶಿಸಿದೆ.
ರಾಜ್ಯ ಸರ್ಕಾರ ಕೆಲ ಐಎಎಸ್ ಹಾಗೂ ಐಎಫ್‍ಎಸ್ ಅಧಿಕಾರಿಗಳಿಗೆ ಹೊಸವರ್ಷದ ಕೊಡುಗೆ ನೀಡಿದ್ದು, ಒಟ್ಟು 22 ಐಎಎಸ್, 11 ಐಪಿಎಸ್ ಹಾಗೂ 12 ಐಎಫ್‍ಎಸ್ ಅಧಿಕಾರಿಗಳು ಮುಂಬಡ್ತಿ ಪಡೆದಿದ್ದಾರೆ.
ಮುಂಬಡ್ತಿ ಪಡೆದ ಐಎಎಸ್ ಅಧಿಕಾರಿಗಳು:
ಶ್ರೀವತ್ಸ ಕೃಷ್ಣ ಕಾರ್ಯದರ್ಶಿ, ಕಾಫಿಬೋರ್ಡ್, ಎಂ.ಮಹೇಶ್ವರ್ ರಾವ್ ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹಾಗೂ ಟಿ.ಕೆ.ಅನಿಲ್ ಕುಮಾರ್ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಮುಂಬಡ್ತಿ ಪಡೆದುಕೊಂಡಿದ್ದಾರೆ.
ಐಎಎಸ್ ಅಧಿಕಾರಿಗಳಾದ ಕೆ.ವಿ.ತ್ರಿಲೋಕ್ ಚಂದ್ರ, ಕೆ.ಪಿ.ಮೋಹನ್ ರಾಜ್, ರಿಚರ್ಡ್ ವಿನ್ಸೆಂಟ್ ಡಿಸೋಜಾ , ಅಭಿರಾಂ ಜಿ.ಶಂಕರ್, ಸಿಂಧು ಬಿ.ರೂಪೇಶ್, ಕುರ್ಮಾರಾವ್, ರಾಗಪ್ರಿಯಾ, ಅನಿರುದ್ಧ್, ಶ್ರವಣ್, ಪೊಮ್ಮಳ ಸುನಿಲ್ ಕುಮಾರ್, ಹೆಫ್ಸಿಬಾ ರಾಣಿ, ಶರತ್ ಅವರಿಗೆ ಬಿ ಗ್ರೇಡ್ ಜತೆಗೆ ವೇತನ ನೀಡಿ ಬಡ್ತಿ ನೀಡಲಾಗಿದೆ.
ಐಎಎಸ್ ಅಧಿಕಾರಿಗಳಾದ ದರ್ಶನ್.ಹೆಚ್.ವಿ, ಮೊಹಮ್ಮದ್ ಇಕ್ರಮುಲ್ಲಾ, ಆನಂದ್.ಕೆ, ಪೂವಿತಾ. ಎಸ್, ಪಂಡ್ವೆ ರಾಹುಲ್ ತುಕಾರಾಂ, ಭೋಯರ್ ಹರ್ಷಲ್ ನಾರಾಯಣ್ ರಾವ್, ಗ್ಯಾನೇಂದ್ರ ಕುಮಾರ್, ಪ್ರೀತಿ ಗೆಹ್ಲೋಟ್‍ರಿಗೂ ಗ್ರೇಡ್ ಮತ್ತು ವೇತನ ಬಡ್ತಿ ನೀಡಲಾಗಿದೆ.
ಮುಂಬಡ್ತಿ ಪಡೆದ ಐಪಿಎಸ್ ಅಧಿಕಾರಿಗಳು:
11 ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಮುಂಬಡ್ತಿ ನೀಡಿದ್ದು, ಮೂವರು ಐಪಿಎಸ್ ಅಧಿಕಾರಿಗಳಾದ ಎ.ಸುಬ್ರಹ್ಮಣ್ಯೇಶ್ವರ ರಾವ್ ಐಜಿಪಿ, ಆಂತರಿಕ ಭದ್ರತೆ, ಡಾ.ಚಂದ್ರಗುಪ್ತಾ-ಡಿಐಜಿ ಬಂಧಿಖಾನೆ ಹಾಗೂ ತ್ಯಾಗರಾಜನ್ ಸಿಒಡಿ ಡಿಐಜಿಯಾಗಿ ಮುಂಬಡ್ತಿ ಪಡೆದಿದ್ದಾರೆ.
ಉಳಿದಂತೆ ಐಪಿಎಸ್ ಅಧಿಕಾರಿಗಳಾದ ಕಾರ್ತಿಕ್ ರೆಡ್ಡಿ, ಪಾಟೀಲ್ ವಿನಾಯಕ್ ವಸಂತರಾವ್, ಕುಲ್ದೀಪ್ ಕುಮಾರ್ ಜೈನ್, ಸಂತೋಷ್ ಬಾಬು, ಇಶಾಪಂತ್‍ಗೆ ವೇತನ ಬಡ್ತಿ ದೊರೆತಿದೆ. ಇನ್ನು ಐಪಿಎಸ್ ಅಧಿಕಾರಿಗಳಾದ ಚೇತನ್ ಸಿಂಗ್ ರಾಥೋಡ್, ಶಶಿ ಕುಮಾರ್ ಮತ್ತು ವೈ.ಎಸ್.ರವಿ ಕುಮಾರ್‍ಗೆ ಗ್ರೇಡ್ ಹಾಗೂ ವೇತನ ಬಡ್ತಿ ನೀಡಲಾಗಿದೆ.
ಮುಂಬಡ್ತಿ ಪಡೆದ ಐಪಿಎಸ್ ಅಧಿಕಾರಿಗಳು :
12 ಐಎಫ್‍ಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಮುಂಬಡ್ತಿ ನೀಡಿದ್ದು, ವಿಜಯ್ ಮೋಹನ್ ರಾಜ್‍ಗೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಮುಂಬಡ್ತಿ ನೀಡಲಾಗಿದೆ. ಇನ್ನು ಮಂಜುನಾಥ್ ಆರ್. ಚವ್ಹಾಣ್, ಟಿ.ಹೀರಾಲಾಲ್, ಪ್ರಕಾಶ್ ನೆಟಲ್ಕರ್, ಪಿ.ಶಂಕರ, ಡಿ.ಯತೀಶ್ ಕುಮಾರ್, ತಾಖತ್ ಸಿಂಗ್ ರಾಣಾವತ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಮುಂಬಡ್ತಿ ಹೊಂದಿದ್ದಾರೆ. ಆಶಿಷ್ ರೆಡ್ಡಿ, ಅರ್ಸಲನ್, ಅಜ್ಜಯ್ಯ ಜಿ. ಆರ್.ಸಂತೋಷ್ ಕುಮಾರ್, ಶಿವಶಂಕರ್ ಇವರಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಯಿಂದ ಅರಣ್ಯ ಉಪಸಂರಕ್ಷಣಾಧಿಕಾರಿಯಾಗಿ ಮುಂಬಡ್ತಿ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
