ಬಳ್ಳಾರಿ :
ಜಿಲ್ಲೆಯ ಐತಿಹಾಸಿಕ ಸ್ಥಳ ಹಂಪಿಯ ರಥ ಬೀದಿಯ ಪಕ್ಕದಲ್ಲಿರುವ ಸಾಲು ಮಂಟಪದ ಒಂದು ಭಾಗವು ಭಾಗಶಃ ಕುಸಿದು ಬಿದ್ದಿರುವ ಘಟನೆ ಭಾನುವಾರ ನಡೆದಿದೆ.
ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವ ಮಳೆಯಿಂದ ಹಂಪಿಯಲ್ಲಿನ ಐತಿಹಾಸಿಕ ಸ್ಮಾರಕಗಳು ಮಳೆಗೆ ಸಂಪೂರ್ಣ ನೆನೆದಿವೆ. ಮಳೆಯಿಂದಾಗಿ ಮಣ್ಣು ಕೂಡ ಮೆತ್ತಗಾಗಿದ್ದು, ಹಂಪಿ ರಥಬೀದಿಯಲ್ಲಿನ ಸಾಲು ಮಂಟಪಗಳ 18 ಕಂಬಗಳು ಕುಸಿದು ಬಿದ್ದಿವೆ.
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸೂಕ್ತ ಸಂರಕ್ಷಣೆ ಹಾಗೂ ನಿರ್ವಹಣೆಯ ಕೊರತೆಯಿಂದಾಗಿ ಆ ಕಂಬಗಳು ಕುಸಿದು ಬಿದ್ದಿವೆ ಎಂಬ ಮಾತು ಕೇಳಿ ಬರುತ್ತಿದ್ದು, ಇನ್ನೂ ಮಳೆ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸ್ಮಾರಕಗಳು ನೆಲಕ್ಕುರುಳುವ ಆತಂಕ ಎದುರಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ