ಬೆಂಗಳೂರು :
ಸ್ಯಾಂಡಲ್ವುಡ್ ನಟ ದಿ. ಚಿರಂಜೀವಿ ಸರ್ಜಾ ಮಡದಿ ನಟಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಜೂನಿಯರ್ ಚಿರು ಆಗಮನ ಸರ್ಜಾ ಕುಟುಂಬದ ಖುಷಿಯನ್ನು ಇಮ್ಮಡಿಗೊಳಿಸಿದೆ.
ಇಂದು ಮೇಘನಾ – ಚಿರಂಜೀವಿ ಸರ್ಜಾ ನಿಶ್ಚಿತಾರ್ಥ ಮಾಡಿಕೊಂಡಂತ ದಿನವಾಗಿತ್ತು. ಇಂದೇ ಮಗುವಿಗೆ ಜನ್ಮ ನೀಡುವ ಸಂಬಂಧ ನಟಿ ಮೇಘನಾರಾಜ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಮೇಘನಾರಾಜ್11.07ಕ್ಕೆ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದು, ಈ ಮೂಲಕ ಸರ್ಜಾ ಕುಟುಂಬಕ್ಕೆ ಜೂನಿಯರ್ ಚಿರು ಎಂಟ್ರಿ ಕೊಟ್ಟಿದ್ದಾರೆ.
ಆಸ್ಪತ್ರೆಯ ಮುಂದೆ ಅಭಿಮಾನಿಗಳು, ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. nಮ್ಮ ಚಿರು ಅಣ್ಣ ಎಲ್ಲೂ ಹೋಗಿಲ್ಲ, ಎಲ್ಲರ ಜೊತೆಯಲ್ಲಿದ್ದಾರೆ, ಮಗುವಿನ ರೂಪದಲ್ಲಿ ಮತ್ತೆ ಬಂದಿದ್ದಾರೆ ಎಂದು ಸಂಭ್ರಮದಿಂದ ಆಸ್ಪತ್ರೆಯ ಹೊರಗೆ ಪಟಾಕಿ ಹಚ್ಚಿ ಸಿಹಿ ಹಂಚಿ ಸಂಭ್ರಮವನ್ನು ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಜೂನ್ 7ರಂದು ಚಿರಂಜೀವಿ ಸರ್ಜಾ ಹಠಾತ್ತಾಗಿ ಹೃದಯಾಘಾತದಿಂದ ನಿಧನ ಹೊಂದಿ ಕುಟುಂಬ ವರ್ಗಕ್ಕೆ, ಅಪಾರ ಬಂಧು-ಮಿತ್ರರಿಗೆ, ಅಭಿಮಾನಿಗಳನ್ನು ದುಃಖ ಸಾಗರದಲ್ಲಿ ಮುಳುಗಿಸಿ ಹೋಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ