ಬೆಂಗಳೂರು:
ಅನಿಲ್ ನನ್ನ ಸಹೋದರ ಇದ್ದ ಹಾಗೆ. ಅವರ ಜೊತೆಗೆ ರೂಮ್ ಬುಕ್’ ಎನ್ನುವ ಸುದ್ದಿ ಸುಳ್ಳು” ಎಂದು ಪೂಜಾಗಾಂಧಿ ಸ್ಪಷ್ಟನೆ ನೀಡಿದ್ದಾರೆ.
ಪೂಜಾ ಗಾಂಧಿ ವಿರುದ್ಧ ಇಂದು ಗಂಭೀರ ಆರೋಪ ಕೇಳಿ ಬಂದಿತ್ತು. ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಬಿಲ್ ಪಾವತಿ ಮಾಡದೆ ಯಾಮಾರಿಸಿದ್ದರು ಎಂದು ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅಲ್ಲದೇ ಪೂಜಾಗಾಂಧಿ ಹೆಸರು ಬಿಜೆಪಿ ಪಕ್ಷದ ಮುಖಂಡ ಅನಿಲ್ ಮೆಣಸಿನಕಾಯಿ ಜೊತೆಗೆ ಕೇಳಿ ಬರುತ್ತಿದೆ. ಅನಿಲ್ ಮೆಣಸಿನಕಾಯಿ ಹಾಗೂ ಪೂಜಾಗಾಂಧಿ ಇಬ್ಬರ ಹೆಸರಿನಲ್ಲಿ ರೂಮ್ ಬುಕ್ ಆಗಿರುವುದು ಅನುಮಾನ ಮೂಡಿಸಿತ್ತು.
ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಜೊತೆಗೆ ತಮ್ಮ ಹೆಸರು ಇರುವ ಬಗ್ಗೆ ಪೂಜಾಗಾಂಧಿ ಪ್ರತಿಕ್ರಿಯೆ ನೀಡಿದ್ದು, ”ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದ ಸಮಯದಲ್ಲಿ ಅನಿಲ್ ಮೆಣಸಿನಕಾಯಿ ಅವರು ಪರಿಚಯ ಆಗಿದ್ದರು. ಅವರು ನನ್ನ ಸಹೋದರ ಇದ್ದ ಹಾಗೆ. ಅವರ ಜೊತೆಗೆ ರೂಮ್ ಬುಕ್’ ಎನ್ನುವ ಸುದ್ದಿ ಸುಳ್ಳು” ಎಂದು ಸ್ಪಷ್ಟನೆ ನೀಡಿದ್ದಾರೆ.
ಅಶೋಕ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿರುವುದನ್ನು ಒಪ್ಪಿಕೊಂಡಿರುವ ಪೂಜಾ ಗಾಂಧಿ ತಮ್ಮ ಬ್ಯಾನರ್ ಸಿನಿಮಾದ ಪ್ರೊಡಕ್ಷನ್ಸ್ ನಡೆಯುವ ಸಮಯದಲ್ಲಿ ಹೈದರಾಬಾದ್, ಬಾಂಬೆ, ಚೆನ್ನೈನ ಕಲಾವಿದರು ಹಾಗೂ ತಂತ್ರಜ್ಞರಿಗಾಗಿ ರೂಮ್ ಅಗತ್ಯ ಇತ್ತು ಆ ಕಾರಣಕ್ಕೆ ರೂಮ್ ಬುಕ್ ಮಾಡಿದ್ದರು ಎಂದು ತಿಳಿಸಿದ್ದಾರೆ.
ಸಹಕಲಾವಿದರು ಹಾಗೂ ಟೆಕ್ನಿಷಿಯನ್ಸ್ ಅವರು ಅಶೋಕ ಹೊಟೇಲಿನಲ್ಲಿ ಉಳಿದುಕೊಂಡಿದ್ದರು. ಆದ್ರೆ ನಾನು ರೂಂ ಬುಕ್ ಮಾಡಿ ಯಾರ ಜೊತೆಗೆ ಇದ್ದೆ ಎನ್ನುವುದು ಸುಳ್ಳು. ನಾವಿಬ್ಬರು ಒಂದು ವರ್ಷ ರೂಂ ಬುಕ್ ಮಾಡಿ ಜೊತೆಗಿದ್ದೆವು ಎನ್ನುವುದಕ್ಕೆ ನಿಮ್ಮಲ್ಲಿ ಸಾಕ್ಷಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
