ಸ್ಯಾಂಡಲ್’ವುಡ್ ಡ್ರಗ್ಸ್ ಕೇಸ್ : ಸಿಸಿಬಿಯಿಂದ ಮತ್ತೊಬ್ಬ ಆರೋಪಿ ಅರೆಸ್ಟ್!!

 ಬೆಂಗಳೂರು:

     ಸ್ಯಾಂಡಲ್​​ವುಡ್ ಮಾದಕ ಜಾಲದ ಪ್ರಕರಣದ‌ ತನಿಖೆಯನ್ನು ಸಿಸಿಬಿ ಪೊಲೀಸರು ತೀವ್ರಗೊಳಿಸಿದ್ದು, ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು‌ ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ.

      ಅಶ್ವಿನ್ ಭೋಗಿ ಬಂಧಿತ ಆರೋಪಿ. ಕಾಟನ್‌ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಸಿಸಿಬಿ ಪೊಲೀಸರು 9ನೇ ಆರೋಪಿ ಅಶ್ವಿನ್ ಭೋಗಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

     ಮಾದಕ ಜಾಲದಲ್ಲಿ ಚಂದವನದ ಕೆಲವರು ಭಾಗಿಯಾಗಿದ್ದಾರೆ‌ ಎಂದು ಎನ್​ಸಿಬಿ ಮಾಹಿತಿ ನೀಡಿದ ಬೆನ್ನಲ್ಲೇ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ದೂರಿನಲ್ಲಿ ಅಶ್ವಿನ್ ಭೋಗಿ ಹೆಸರು ನಮೂದಾಗುತ್ತಿದ್ದಂತೆ ಆತ ತಲೆಮರೆಸಿಕೊಂಡಿದ್ದನು. ಹೀಗಾಗಿ ಆತನ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಚಿಕ್ಕಮಗಳೂರಿನಲ್ಲಿ ಅಶ್ವಿನ್ ಇರುವಿಕೆಯ ಬಗ್ಗೆ ಸುಳಿವು ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.

     ಬಂಧಿತ ಅಶ್ವಿನ್, ನಟಿಯರೊಂದಿಗೆ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿ ಸೇರಿ ಡ್ರಗ್ ಪೆಡ್ಲಿಂಗ್ ಮಾಡಿದ್ದಾನೆ ಎನ್ನಲಾಗಿದೆ. ಸಿಸಿಬಿ ಪೊಲೀಸರಿಂದ ಅಶ್ವಿನ್ ವಿಚಾರಣೆ ಅಂತ್ಯಗೊಂಡ ಬಳಿಕವೇ ಎಲ್ಲಾ ಮಾಹಿತಿ ಹೊರಬರಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap