H1N1 : ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಿ ಎಂದ ಕಂಪನಿ!!

ಬೆಂಗಳೂರು: 

      ಹೆಚ್‌1ಎನ್1 ಸೋಂಕಿನ ಭೀತಿಯಿಂದ ಜರ್ಮನಿ ರಾಷ್ಟ್ರ ಮೂಲದ ಎಸ್​ಎಪಿ ಸಂಸ್ಥೆ ಫೆಬ್ರವರಿ 20 ರಿಂದ 28ರವರೆಗೂ ಭಾರತದ ದೆಹಲಿ, ಗುರುಗ್ರಾಮ ಹಾಗೂ ಬೆಂಗಳೂರಿನ ಕಚೇರಿಗಳನ್ನು ಬಂದ್ ಮಾಡಿ ಆದೇಶಿಸಿದೆ.

      ಇತ್ತೀಚೆಗೆ ಕೊರೊನಾ ವೈರಸ್​ ಭೀತಿ ಎಲ್ಲೆಡೆ ಹೆಚ್ಚಿದೆ. ಈ ಮಧ್ಯೆ ಸ್ಯಾಪ್​​ನ ಬೆಂಗಳೂರಿನ ಕಚೇರಿಯ ಇಬ್ಬರು ನೌಕರರಿಗೆ ಹಂದಿ ಜ್ವರ ಇರುವುದು ಖಚಿತವಾಗಿದೆ. ಹೀಗಾಗಿ, ರೋಗ ಹಬ್ಬದಂತೆ ಮುನ್ನೆಚ್ಚರಿಕೆ ವಹಿಸಲು, ಬೆಂಗಳೂರು, ಗುರುಗ್ರಾಮ ಹಾಗೂ ಮುಂಬೈನ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಸಂಸ್ಥೆಯ ಉದ್ಯೋಗಿಗಳಿಗೆ ವರ್ಕ್​ ಫ್ರಾಮ್​ ಹೋಂ​ ಆಯ್ಕೆ ನೀಡಲಾಗಿದೆ. ಮುಂದಿನ ಆದೇಶ ಬರುವವರೆಗೂ ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚಿಸಲಾಗಿದೆ.

      ಫೆಬ್ರವರಿ 28ರವರೆಗೂ ಮಾರತ್ತಹಳ್ಳಿಯ ಕಚೇರಿಯನ್ನು ಶುಚಿಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ವಿವರಿಸಿದೆ.

        ಕಳೆದ ವರ್ಷ ಹೆಚ್1ಎನ್1 ಸೋಂಕಿಗೆ ಸುಮಾರು 49 ಸಾವಿರ ಜನ ವಿಶ್ವಾದ್ಯಂತ ಸಾವನ್ನಪ್ಪಿದ್ದರು. ಹಂದಿ ಜ್ವರ 2009ರಂದು ಅಮೆರಿಕದಲ್ಲಿ ಮೊದಲು ಪತ್ತೆ ಆಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ