ಬೆಳಗಾವಿ:
ಆಪರೇಷನ್ ಕಮಲ ಆಗಲು ಸತೀಶ್ ಮತ್ತು ಎಂ.ಬಿ.ಪಾಟೀಲ್ ನೇರ ಕಾರಣ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗೋಕಾಕ್ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಉಪಚುನಾವಣೆಗೆ ತಯಾರಿ ನಡೆಸಿ ಶಕ್ತಿ ಪ್ರದರ್ಶನ ನಡೆಸಿ, ತಮ್ಮ ನಿವಾಸದ ಮುಂಭಾಗದಲ್ಲಿಯೇ ಬೃಹತ್ ವೇದಿಕೆಯನ್ನು ಸಜ್ಜಗೊಳಿಸಿದ್ದರು.
ಈ ವೇಳೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಒಬ್ಬ ಕುತಂತ್ರಿ ಹಾಗೂ ಮಹಾಮೋಸಗಾರ ರಾಜಕಾರಣಿ. ಆಪರೇಷನ್ ಕಮಲ ಆಗಲು ಸತೀಶ್ ಮತ್ತು ಎಂ ಬಿ ಪಾಟೀಲ್ ನೇರ ಕಾರಣ ಎಂದಿದ್ದಾರೆ. ನಾನು ಕಾಂಗ್ರೆಸ್ ಪಕ್ಷದ ಮೂಲ ಕಾರ್ಯಕರ್ತ. ಅದರೆ ಕಾಂಗ್ರೆಸ್ ನಲ್ಲಿ ಚಮಚಾಗಿರಿ ಮಾಡುವವರಿಗೆ ಬೆಲೆ ಇದೆ . ಅಲ್ಲಿ ನನಗೆ ಸರಿಯಾದ ಸ್ಥಾನ ಸಿಗಲಿಲ್ಲ, ಹೀಗಾಗಿ ನಾನು ರಾಜೀನಾಮೆ ಕೊಟ್ಟೆ ಎಂದು ತಮ್ಮ ರಾಜೀನಾಮೆಗೆ ಕಾರಣ ನೀಡಿದ್ದಾರೆ.
ನನ್ನ ನಂಬಿ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಅವರ ಪರ ಕಾನೂನು ಹೋರಾಟ ಮಾಡುತ್ತೇನೆ. ದೇವರ ಆಶೀರ್ವಾದದಿಂದ ಸುಪ್ರೀಂ ಕೋರ್ಟ್ ನಿಂದ ನ್ಯಾಯ ಸಿಗಲಿದೆ. ಮುಂದಿನ ಚುನಾವಣೆ ನಿಲ್ಲಲು ನನಗೆ ಅವಕಾಶ ಇದೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ