ಬೆಂಗಳೂರು :
2020ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕದ ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
2019 -20 ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಪರೀಕ್ಷೆ ಮಾರ್ಚ್ 4 ರಿಂದ 23 ರವರೆಗೆ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗಳು ಬೆಳಗ್ಗೆ 10.15ಕ್ಕೆ ಆರಂಭವಾಗಲಿದ್ದು, ಮಧ್ಯಾಹ್ನ 1.30ಕ್ಕೆ ಪರೀಕ್ಷಾ ವೇಳೆ ಕೊನೆಗೊಳ್ಳಲಿದೆ.
- ಮಾರ್ಚ್ 4 ರಂದು ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಮ್ಯಾಥ್ಸ್
- ಮಾರ್ಚ್ 5 ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್,
- ಮಾರ್ಚ್ 6 ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ
- ಮಾರ್ಚ್ 7 ರಂದು ಬಿಸಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನಶಾಸ್ತ್ರ
- ಮಾರ್ಚ್ 9 ರಂದು ಇನ್ಫಾರ್ಮೇಷನ್ ಟೆಕ್ನಾಲಜಿ, ಆಟೋಮೊಬೈಲ್ಸ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
- ಮಾರ್ಚ್ 10 ರಂದು ಉರ್ದು
- ಮಾರ್ಚ್ 11 ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ
- ಮಾರ್ಚ್ 12 ರಂದು ಭೂಗೋಳಶಾಸ್ತ್ರ
- ಮಾರ್ಚ್ 13 ರಂದು ಶಿಕ್ಷಣ
- ಮಾರ್ಚ್ 14 ರಂದು ಮನೋವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ವಿಜ್ಞಾನ
- ಮಾರ್ಚ್ 16 ರಂದು ಭೂವಿಜ್ಞಾನ, ತರ್ಕಶಾಸ್ತ್ರ, ಭೂ ವಿಜ್ಞಾನ
- ಮಾರ್ಚ್ 17 ರಂದು ಅರ್ಥಶಾಸ್ತ್ರ, ಜೀವಶಾಸ್ತ್ರ,
- ಮಾರ್ಚ್ 18 ರಂದು ಹಿಂದಿ
- ಮಾರ್ಚ್ 19ರಂದು ಕನ್ನಡ
- ಮಾರ್ಚ್ 20 ರಂದು ಸಂಸ್ಕೃತ
- ಮಾರ್ಚ್ 21 ರಂದು ರಾಜ್ಯಶಾಸ್ತ್ರ, ಸ್ಟಾಟಿಸ್ಟಿಕ್ಸ್
- ಮಾರ್ಚ್ 23 ರಂದು ಇಂಗ್ಲೀಷ್
ಇನ್ನು ಪರೀಕ್ಷೆಯಲ್ಲಿ ಯಾವುದೇ ರೀತಿಯಲ್ಲಿ ತೊಡಕು ಉಂಟಾಗದಂತೆ ಪರೀಕ್ಷೆಗಳನ್ನು ನಡೆಸಲು ಪಿಯು ಮಂಡಳಿ ನಿರ್ಧರಿಸಿದ್ದು, ಇದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
