ಪೊಲೀಸ್ ಗಸ್ತು : ಗುಂಪು ಸೇರಿದ್ರೆ ಬೀಳುತ್ತೆ ಲಾಠಿ ಏಟು!!

ಬೆಂಗಳೂರು:

      ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ವೇಳೆ ಮನೆಯಿಂದ ಅಗತ್ಯವಿಲ್ಲದೇ ಹೊರಗೆ ಬಂದರೇ ನಿಮಗೂ ಕೂಡ ಲಾಠಿ ರುಚಿ ಹತ್ತಬಹುದು.

      ಹೌದು, ಈ ನಡುವೆ ರಾಜ್ಯದ ನಾನಾ ಭಾಗಗಳಲ್ಲಿ ಜನತೆ ಮೀತಿ ಮೀರಿ ನಡೆದುಕೊಳ್ಳುತ್ತಿದ್ದು, ಸುಖಸುಮ್ಮನೆ ಗುಂಪುಗೂಡುವುದು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡುವುದು ಸೇರಿದಂತೆ ಸುಖ ಸುಮ್ಮನೆ ಮನೆಯಿಂದ ಹೊರಗಡೆ ತಿರುಗಾಡುತ್ತಿದ್ದಾರೆ.

      ಇಂದು ಪ್ರಾರಂಭದಲ್ಲಿ ಜನತೆಯಲ್ಲಿ ಮನೆಯಿಂದ ಅಗತ್ಯ ಸನ್ನಿವೇಶ ಬಿಟ್ಟು ಬೇರೆ ಕಾರಣಕ್ಕೆ ಬಾರದಂತೆ ಮನವಿ ಮಾಡಿಕೊಂಡರು ಕೂಡ ಅನೇಕ ಮಂದಿ ಮನೆಯಿಂದ ತಿರುಗಾಡುತ್ತಿರುವುದುನ್ನು ಗಮನಿಸಿ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಲಘು ಲಾಠಿ ಪ್ರಹಾರ ನಡೆಸುತ್ತಿದ್ದಾರೆ. ಒಂದು ವೇಳೆ ಮನೆಯಿಂದ ಹೊರಗೆ ಬರಬೇಕಾದ್ರೆ ನೀವು ಪೊಲೀಸರಿಗೆ ಸರಿಯಾದ ಮಾಹಿತಿಯನ್ನು ನೀಡಿದರೆ ಒಳಿತು. ಇಲ್ಲದಿದ್ದರೆ, ಜನರು ಗುಂಪು ಸೇರುವುದು ಕಂಡು ಬಂದರೆ ಲಾಠಿ ರುಚಿ ತೋರಿಸುವುದು ಖಂಡಿತ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ