ಬೆಂಗಳೂರು :

ತಡರಾತ್ರಿಯವರೆಗೆ ಕೆಲಸ ಮುಗಿಸಿ ಮನೆಗೆ ಹೊರಡಲು ಮುಂದಾಗುತ್ತಿದ್ದ ವಕೀಲೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿರುವ ಕಾಮುಕ ಸೆಕ್ಯೂರಿಟಿ ಗಾರ್ಡ್ ಬಂಧನಕ್ಕೆ ಅಶೋಕನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಅಶೋಕನಗರದ ಕಚೇರಿಯಲ್ಲಿ ತಡರಾತ್ರಿವರೆಗೂ ಕೆಲಸ ಮಾಡುತ್ತಿದ್ದ ವಕೀಲೆಯ ಮೇಲೆ ಅತ್ಯಾಚಾರ ಯತ್ನ ನಡೆಸಿ ಪರಾರಿಯಾಗಿರುವ ಕಾಮುಕ ಸೆಕ್ಯೂರಿಟಿ ಗಾರ್ಡ್ ಬಂಧನಕ್ಕೆ ಶೋಧ ನಡೆಸಲಾಗಿದೆ.
ಎರಡು ದಿನಗಳ ಹಿಂದೆ ಕಟ್ಟಡದ ಸೆಕ್ಯೂರಿಟಿ ಗಾರ್ಡ್ ವಿದ್ಯುತ್ ಸ್ಥಗಿತಗೊಳಿಸಿ ಕತ್ತಲಲ್ಲಿ ವಕೀಲೆಯು ಕೆಲಸ ಮಾಡುತ್ತಿದ್ದ ಕಚೇರಿಗೆ ನುಗ್ಗಲು ಬಂದಿದ್ದಾನೆ.ಕತ್ತಲಾಗಿದ್ದರಿಂದ ವಕೀಲೆಯು ಮೊಬೈಲ್ ಟಾರ್ಚ್ ಹಾಕಿ ಹೊರಗೆ ಬರಲು ಮುಂದಾಗುತ್ತಿದ್ದಂತೆ ಎದುರಾದ ಸೆಕ್ಯೂರಿಟಿ ಗಾರ್ಡ್ ದುರುಗುಟ್ಟಿ ನೋಡಿ ಬಾಗಿಲು ಹಾಕಿ ಮೊಬೈಲ್ ಟಾರ್ಚ್ ಆಫ್ ಮಾಡಿದ್ದಾನೆ.
ವಕೀಲೆಯನ್ನು ಕೆಳಗೆ ಬೀಳಿಸಿ ತಲೆ ಭಾಗವನ್ನು ಒತ್ತಿದ್ದು ಮದ್ಯಪಾನ ಮಾಡಿದ್ದ ಆತ ಎದೆ, ಕೈ ಹಾಗೂ ಮೈ ಭಾಗವನ್ನು ಮುಟ್ಟಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ.ರಕ್ಷಣೆಗಾಗಿ ಜೋರಾಗಿ ಕೂಗಾಡಿದ್ದರಿಂದ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಸಂಬಂಧ ವಕೀಲೆಯು ನೀಡಿರುವ ದೂರು ದಾಖಲಿಸಿಕೊಂಡಿರುವ ಅಶೋಕನಗರ ಪೊಲೀಸರು ಕಾಮುಕನ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








