ವಿದ್ಯುತ್ ತಂತಿ ಸ್ಪರ್ಶ : 7 ಆನೆಗಳ ಮಾರಣಹೋಮ…!

ಭುವನೇಶ್ವರ್: 

      ಆಹಾರ ಹುಡುಕಿಕೊಂಡು ಬಂದ ಆನೆಗಳಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಏಳು ಆನೆಗಳು ದಾರುಣವಾಗಿ ಮೃತಪಟ್ಟ ಘಟನೆ ಒಡಿಶಾದ ಧೆಂಕನಲ್ ಜಿಲ್ಲೆಯಲ್ಲಿ ನಡೆದಿದೆ.

      ಟ್ರ್ಯಾಕ್ ನಿರ್ಮಾಣ ಕೆಲಸಕ್ಕಾಗಿ ರೈಲ್ವೆ ಇಲಾಖೆ ವತಿಯಿಂದ 13 ಆನೆಗಳನ್ನು ಕರೆತರಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವೇಳೆ ಆಹಾರ ಹುಡುಕಿಕೊಂಡು ಶುಕ್ರವಾರ ರಾತ್ರಿ ಧೆಂಕನಾಲ್ ಸಾಡರ್ ಅರಣ್ಯ ವ್ಯಾಪ್ತಿಯ ಕಮಲಾಂಗ ಹಳ್ಳಿಗೆ ಆನೆಗಳು ಪ್ರವೇಶಿಸಿವೆ.

     ಈ ವೇಳೆ ವಿದ್ಯುತ್ ತಂತಿ ಸ್ಪರ್ಶದಿಂದ 7 ಆನೆಗಳು ಸ್ಥಳದಲ್ಲೇ ಮೃತಪಟ್ಟಿವೆ. ಉಳಿದ 6 ಆನೆಗಳು ಅದೃಷ್ಟವಶಾತ್ ಬದುಕುಳಿದಿವೆ. ಆನೆಗಳು ಸತ್ತು ಬಿದ್ದಿರುವ ದೃಶ್ಯ ಬೆಳಗ್ಗೆ ಗ್ರಾಮಸ್ಥರಿಗೆ ಗೊತ್ತಾಗಿದೆ.

      ಆನೆಗಳು ಮೃತಪಟ್ಟ ಸುದ್ದಿ ತಿಳಿದ ಕೂಡಲೇ ಧೆಂಕನಲ್ ಡಿಎಫ್‍ಒ ಸುದರ್ಶನ್ ಪತ್ರಾ ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ರೈಲ್ವೆ ಮತ್ತು ಇಂಧನ ಇಲಾಖೆಯ ಬೇಜವಾಬ್ಧಾರಿತನದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap