ಜೂ.16-24 ರವರೆಗೆ ರೈಲುಗಳ ಸಂಚಾರದಲ್ಲಿ ವ್ಯತ್ಯಯ!!

ಮೈಸೂರು :

      ಜೂನ್ 16ರಿಂದ 24ರವರೆಗೆ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

      ರೈಲುಗಳ ಹಳಿ ಜೋಡಣೆ, ತಿರುವಿನಲ್ಲಿ ಬದಲಾವಣೆ, ಸಮಯ ಬದಲಾವಣೆ ಮಾಡುವ ಉದ್ದೇಶದಿಂದ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. 

      ಜೂನ್ 21 ರಂದು ಮೈಸೂರಿನಿಂದ ಹೊರಡುವ ಮೈಸೂರು ರಾಣೆಗುಂಟ ಎಕ್ಸ್ ಪ್ರೆಸ್ ರೈಲು, ಜೂನ್ 22ರಂದು ರಾಣೆ ಗುಂಟದಿಂದ ಮೈಸೂರಿಗೆ ಬರುವ ರೈಲಿನ ಸಂಚಾರವನ್ನು ರದ್ದುಗೊಳಿಸಲಾಗಿದೆ. ಜೂನ್ 16ರಿಂದ 23ರವರೆಗೆ ಚಾಮರಾಜನಗರದಿಂದ ಮೈಸೂರಿಗೆ ಬರುವ ಹಾಗೂ ಮೈಸೂರಿನಿಂದ ಚಾಮರಾಜನಗರಕ್ಕೆ ತೆರಳಲಿರುವ ಪ್ಯಾಸೆಂಜರ್ ರೈಲು ಮತ್ತು ಮೈಸೂರಿನಿಂದ ಯಶವಂತಪುರಕ್ಕೆ ತೆರಳುವ ಪ್ಯಾಸೆಂಜರ್ ರೈಲು ಸೇವೆಯನ್ನು ರದ್ದು ಮಾಡಿ, ಮೈಸೂರಿನಿಂದ ಕೆಎಸ್ಆರ್ ಬೆಂಗಳೂರು ನಡುವೆ ಬರುವ ಹಾಗೂ ಹೊರಡುವ ಪ್ಯಾಸೆಂಜರ್ ರೈಲನ್ನು ರದ್ದುಪಡಿಸಲಾಗಿದೆ.

      16 ರಿಂದ 23ರವರೆಗೆ ಚಾಮರಾಜನಗರ – ಮೈಸೂರು ಪ್ಯಾಸೆಂಜರ್, ಮೈಸೂರು – ಯಶವಂತಪುರ ಪ್ಯಾಸೆಂಜರ್ ಯಶವಂತ‍ಪುರ – ಸೇಲಂ ಪ್ಯಾಸೆಂಜರ್, ಮೈಸೂರು – ಚಾಮರಾಜನಗರ ಪ್ಯಾಸೆಂಜರ್, ಚಾಮರಾಜನಗರ – ಕೆಎಸ್ ‌ಆರ್‌ ಬೆಂಗಳೂರು ಪ್ಯಾಸೆಂಜರ್, ಕೆಎಸ್ ಆರ್‌ ಬೆಂಗಳೂರು – ಶಿವಮೊಗ್ಗ ಪ್ಯಾಸೆಂಜರ್, ಮೈಸೂರು- ಕೆಎಸ್ ಆರ್‌ ಬೆಂಗಳೂರು ಪ್ಯಾಸೆಂಜರ್ ಕೆಎಸ್ ಆರ್‌ ಬೆಂಗಳೂರು – ಮೈಸೂರು ಪ್ಯಾಸೆಂಜರ್, ಮೈಸೂರು – ಚಾಮರಾಜನಗರ ಪ್ಯಾಸೆಂಜರ್, ಚಾಮರಾಜನಗರ – ಮೈಸೂರು ಪ್ಯಾಸೆಂಜರ್, ಮೈಸೂರು – ಕೆಎಸ್ ‌ಆರ್‌ ಬೆಂಗಳೂರು, ಕೆಎಸ್ ‌ಆರ್ ಬೆಂಗಳೂರು – ಅರಸೀಕೆರೆ ಪ್ಯಾಸೆಂಜರ್, ಮೈಸೂರು – ತಾಳಗುಪ್ಪ ಪ್ಯಾಸೆಂಜರ್, ಮೈಸೂರು – ಚಾಮರಾಜನಗರ ಪ್ಯಾಸೆಂಜರ್ , ಚಾಮರಾಜನಗರ – ಮೈಸೂರು ಪ್ಯಾಸೆಂಜರ್ , ಮೈಸೂರು – ನಂಜನಗೂಡು ಪ್ಯಾಸೆಂಜರ್, ನಂಜನಗೂಡು – ಮೈಸೂರು ಪ್ಯಾಸೆಂಜರ್, ಮಾಲ್ಗುಡಿ ಎಕ್ಸ್‌ಪ್ರೆಸ್‌ ಮೈಸೂರು – ಯಲಹಂಕ , ಮಾಲ್ಗುಡಿ ಎಕ್ಸ್‌ಪ್ರೆಸ್‌ ಯಲಹಂಕ – ಮೈಸೂರು, ರಾಜ್ಯರಾಣಿ ಎಕ್ಸ್‌ಪ್ರೆಸ್‌ ಮೈಸೂರು – ಕೆಎಸ್ ಆರ್‌ ಬೆಂಗಳೂರು, ರಾಜ್ಯರಾಣಿ ಎಕ್ಸ್‌ಪ್ರೆಸ್ ಕೆಎಸ್ ಆರ್ ಬೆಂಗಳೂರು- ಮೈಸೂರು ರೈಲುಗಳು ರದ್ದಾಗಿವೆ.

      17ರಿಂದ 24ರವರೆಗೆ ಸೇಲಂ- ಯಶವಂತಪುರ ಪ್ಯಾಸೆಂಜರ್, ಯಶವಂತಪುರ – ಮೈಸೂರು ಪ್ಯಾಸೆಂಜರ್, ಶಿವಮೊಗ್ಗ- ಕೆಎಸ್‌ಆರ್‌ ಪ್ಯಾಸೆಂಜರ್, ಕೆಎಸ್ಆರ್ ಬೆಂಗಳೂರು- ಚಾಮರಾಜನಗರ ಪ್ಯಾಸೆಂಜರ್, ಅರಸೀಕೆರೆ – ಕೆಎಸ್ ‌ಆರ್‌ ಬೆಂಗಳೂರು ಪ್ಯಾಸೆಂಜರ್, ಕೆಎಸ್ಆರ್ ಬೆಂಗಳೂರು – ಮೈಸೂರು ಪ್ಯಾಸೆಂಜರ್, ತಾಳಗುಪ್ಪ – ಮೈಸೂರು ಪ್ಯಾಸೆಂಜರ್ ಸಂಚಾರ ಇರುವುದಿಲ್ಲ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link