ರೋಷನ್ ಬೇಗ್‍ ಬದಲು ಶರವಣಗೆ ಬಿಜೆಪಿ ಟಿಕೆಟ್ ಘೋಷಣೆ!!!

ಬೆಂಗಳೂರು: 

      ಬಿಜೆಪಿಗೆ ಸೇರ್ಪಡೆಯಾಗಿ ಶಿವಾಜಿನಗರದಿಂದ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದ ರೋಷನ್ ಬೇಗ್​ಗೆ ಬಿಜೆಪಿ ಶಾಕ್ ನೀಡಿದ್ದು ಶಿವಾಜಿ ನಗರ ಕ್ಷೇತ್ರದ ಟಿಕೆಟ್ ಬಿಬಿಎಂಪಿ ಮಾಜಿ ಸದಸ್ಯ ಶರವಣ ಅವರಿಗೆ ನೀಡಿದೆ.

      ಅನರ್ಹಗೊಂಡಿರುವ ಶಾಸಕ ರೋಷನ್ ಬೇಗ್ ಅವರು ಇಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಐಎಂಎ ಕೇಸ್‍ನಲ್ಲಿ ರೋಷನ್ ಬೇಗ್ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರೆ ಕೆಟ್ಟ ಹೆಸರು ಬರಬಹುದು ಎನ್ನುವ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಪಕ್ಷದ ಬಾವುಟವನ್ನು ಬಿಜೆಪಿ ಇಂದು ನೀಡಿರಲಿಲ್ಲ.

ಅನರ್ಹರಿಗೆ ಟಿಕೆಟ್ : 13 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್!!!

      ಅನರ್ಹ ಶಾಸಕ ರೋಷನ್ ಬೇಗ್ ಅವರು ಬಿಜೆಪಿ ಸೇರ್ಪಡೆಯಾಗಿದ್ದರೆ ಅವರಿಗೇ ಟಿಕೆಟ್ ಹಂಚಿಕೆಯಾಗುವುದು ಪಕ್ಕಾ ಆಗಿತ್ತು. ಆದರೆ, ರೋಷನ್ ಬೇಗ್ ಅವರ ಬಿಜೆಪಿ ಸೇರ್ಪಡೆಗೆ ಆರೆಸ್ಸೆಸ್ ಬಲವಾಗಿ ವಿರೋಧಿಸಿದ್ದು, ಬಿಎಸ್​ವೈ ಎಷ್ಟೇ ಪ್ರಯತ್ನಿಸಿದರೂ ಬೇಗ್ ಅವರನ್ನು ಸೇರಿಸಿಕೊಳ್ಳಲು ಸಾಧ್ಯವಾಗಿಲ್ಲ.

      ಆದರೆ, ಈಗ ಬಿಜೆಪಿ ಟಿಕೆಟ್ ಪಡೆದಿರುವ ಮಾಜಿ ನಗರಪಾಲಿಕೆ ಸದಸ್ಯ ಶರವಣ ಅವರು ರೋಷನ್ ಬೇಗ್ ಅವರ ಆಪ್ತ ಎನ್ನಲಾಗಿದ್ದು, ಈ ವಿಷಯ ಕುತೂಹಲ ಮೂಡಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap