ತುಮಕೂರು:
‘ನಡೆದಾಡುವ ದೇವರ’ ಅಂತಿಮ ದರ್ಶನವನ್ನ ಭಕ್ತರು ಪಡೆಯುವ ಉದ್ದೇಶದಿಂದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಡಾ.ಶಿವಕುಮಾರ ಸ್ವಾಮೀಜಿಗಳ ಅಂತಿಮ ದರ್ಶನ ಮುಕ್ತಾಯವಾಗಿದೆ.
ಇದೀಗ ರುದ್ರಾಕ್ಷಿ ರಥವು ಶ್ರೀಗಳ ಇರಿಸಿರುವ ಗೋಸಲ ವೇದಿಕೆಯತ್ತ ದಾವಿಸುತ್ತಿದ್ದು, ಮಠದ ಆವರಣದಲ್ಲಿ 500 ಮೀಟರ್ ವರೆಗೂ ಸಿದ್ದಂಗಾ ಶ್ರೀಗಳ ಅಂತಿಮ ಯಾತ್ರೆ ನಡೆಯಲಿದೆ.
ಕ್ರಿಯಾ ಸಮಾಧಿಯ ಬಳಿ ಮೊದಲು ಶ್ರೀಗಳ ಪಾರ್ಥಿವ ಶರೀರಕ್ಕೆ ಅಂತಿಮಪುಣ್ಯ ಸ್ನಾನ ಮಾಡಿಸುತ್ತಾರೆ. ನಾಡಿನ ಪುಣ್ಯ ನದಿಗಳಿಂದ ತರಿಸಿರುವ ಪವಿತ್ರ ತೀರ್ಥಗಳಿಂದ ಅಭಿಷೇಕ ಮಾಡಿ, ಹೊಸ ಕಾಷಾಯ ವಸ್ತ್ರಗಳನ್ನ ಧರಿಸಲಾಗುತ್ತದೆ. ನಂತರ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿಯವರಿಗೆ ಪಟ್ಟಾಧಿಕಾರ ಹಸ್ತಾಂತರ ಮಾಡಲಾಗುತ್ತದೆ.
ಬಳಿಕ ಚಿಗಲಿ ಮತ್ತು ಹಸಿ ಕಡಲೆಕಾಳು ನೈವೇದ್ಯ ಮಾಡಲಾಗುತ್ತದೆ. ಕೆಳ ಭಾಗದಲ್ಲಿ ಉಪ್ಪು, ಮೆಣಸು ನಂತರ ವಿಭೂತಿ ಗಟ್ಟಿಗಳಿಂದ ಶ್ರೀಗಳ ಪಾರ್ಥಿವ ಶರೀರವನ್ನು ಮುಚ್ಚಲಾಗುತ್ತದೆ. ಪಾರ್ಥೀವ ಶರೀರದ ತಲೆಭಾಗವನ್ನು ಬಿಲ್ವಪತ್ರೆಯಿಂದ ತುಂಬಲಾಗುತ್ತದೆ. ಅದರ ಮೇಲೆ ಮಣ್ಣು ಹಾಕಿ ಕೊನೆಗೆ ಚಪ್ಪಡಿ ಕಲ್ಲನಿಟ್ಟು ಅದರ ಮೇಲೆ ಗದ್ದುಗೆ ನಿರ್ಮಾಣ ಮಾಡಲಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ