ಬೆಂಗಳೂರು :
ಡಾ||ರಾಜ್ಕುಮಾರ್ ಪುತ್ರ, ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಸ್ಯಾಂಡಲ್ವುಡ್ ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಡಾ. ರಾಜ್ಕುಮಾರ್ ಬಳಿಕ ಕನ್ನಡ ಚಿತ್ರರಂಗದಲ್ಲಿ ಹಿರಿಯಣ್ಣನಾಗಿ ರೆಬಲ್ ಸ್ಟಾರ್ ಅಂಬರೀಶ್ , ಚಿತ್ರರಂಗದ ಸಮಸ್ಯೆಗಳನ್ನು ಬಗೆ ಹರಿಸುತ್ತಿದ್ರು. ಆದರೆ ಅಂಬರೀಶ್ ಅಗಲಿಕೆಯಿಂದ ಕನ್ನಡ ಚಿತ್ರರಂಗದಲ್ಲಿ ಯಾರಿಗೆ ನಾಯಕತ್ವದ ಹೊಣೆ ನೀಡಬೇಕು ಎಂಬ ಚರ್ಚೆ ನಡೆಯುತ್ತಲೇ ಇತ್ತು.
ಈ ಕುರಿತು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ, ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ, ನಾಗವಾರದಲ್ಲಿರುವ ಶಿವರಾಜ್ಕುಮಾರ್ ನಿವಾಸದಲ್ಲಿ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಚಿತ್ರರಂಗದ ನಾಯಕರಾಗಿ ಚಿತ್ರರಂಗವನ್ನು ಮುನ್ನಡೆಸುವಂತೆ ಮನವಿ ಮಾಡಲಾಯಿತು. ಎಲ್ಲರ ಮನವಿ ಮೇರೆಗೆ ಶಿವಣ್ಣ ಕೂಡಾ ಇದಕ್ಕೆ ಒಪ್ಪಿಕೊಂಡರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್ಕುಮಾರ್, ಚಿತ್ರರಂಗದ ಎಲ್ಲಾ ವಿಭಾಗಗಳ ಗಣ್ಯರು ಜೊತೆ ಸೇರಿರುವುದು ಖುಷಿಯ ವಿಚಾರ. ನಿಮ್ಮೆಲರ ಸಹಕಾರದಿಂದ ಇನ್ಮುಂದೆ ನಾಯಕತ್ವದ ಹೊಣೆ ವಹಿಸಿಕೊಳ್ಳುತ್ತೇನೆ. ಇನ್ಮುಂದೆ ನಾವೆಲ್ಲರೂ ಒಟ್ಟಾಗಿ ಹೋಗೋಣ,ಕನ್ನಡ ಚಿತ್ರರಂಗವನ್ನು ಮಾದರಿಯನ್ನಾಗಿ ಮಾಡೋಣ ಎಂದು ಹೇಳಿದರು.
ಈ ಸಭೆಯಲ್ಲಿ ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಟ ಸಾಧು ಕೋಕಿಲ, ನಿರ್ಮಾಪಕರಾದ ಸಾ.ರಾ. ಗೋವಿಂದ್, ಜಯಣ್ಣ, ಸೂರಪ್ಪ ಬಾಬು, ಚಿನ್ನೇಗೌಡ, ಭೋಗೇಂದ್ರ, ರಾಮು, ಭಾ.ಮಾ.ಹರೀಶ್, ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಸೇರಿದಂತೆ ಚಿತ್ರರಂಗದ ಬಹುತೇಕ ಎಲ್ಲಾ ಗಣ್ಯರು ಹಾಜರಿದ್ದರು.