ಬೆಂಗಳೂರು:
ಎಚ್ಎಎಲ್ ನೌಕರರ ಜೊತೆ ರಾಹುಲ್ ಗಾಂಧಿ ಅವರ ಈ ಸಭೆ ಯಾವ ಪುರುಷಾರ್ಥಕ್ಕಾಗಿ ಗೊತ್ತಿಲ್ಲ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ
ಇಂದು ಮಲ್ಲೇಶ್ವರಂನ ಬಿಜೆಪಿ ಕಚೇರಿ ಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹೆಚ್ಎಎಲ್ ಬಗ್ಗೆ ತಿಳಿದುಕೊಳ್ಳಲು ಬರ್ತಿದ್ದಾರಂತೆ. 3 ಬಾರಿ ಸಂಸದರಾಗಿರುವ ಅವರಿಗೆ ಹೆಚ್ಎಎಲ್ ಬಗ್ಗೆ ಗೊತ್ತಿಲ್ಲ ಎನ್ನುವುದು ದೊಡ್ಡ ಜೋಕ್ ಎಂದು ಶೋಭಾ ಕರಂದ್ಲಾಜೆ ಲೇವಡಿ ಮಾಡಿದರು.
’50 ವರ್ಷಕ್ಕೂ ಅಧಿಕ ಕಾಲ ದೇಶ ಆಳಿದ ಕಾಂಗ್ರೆಸ್ ಪಕ್ಷ ರಕ್ಷಣಾ ಇಲಾಖೆಗೆ ಅಗತ್ಯ ಯುದ್ಧ ಸಾಮಗ್ರಿ ಖರೀದಿಸಿಲ್ಲ. ರಾತ್ರಿ ಹೊತ್ತು ಗಸ್ತು ಕಾಯುವಾಗ ಸೈನಿಕರು ಬಳಸುವ ಕನ್ನಡಕವನ್ನು ಖರೀದಿಸಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲೇ ರಫೇಲ್ ಯುದ್ಧ ವಿಮಾನ ಖರೀದಿ ಮಾಡಬಹುದಿತ್ತಲ್ಲವೆ’ ಎಂದು ಪ್ರಶ್ನಿಸಿದರು.
‘ಯಾರ ಜೊತೆ ನೀವು ಸಭೆ ನಡೆಸುತ್ತಿದ್ದೀರಿ. ನಿಷೇಧಿತ ಸ್ಥಳದಲ್ಲಿ ಸಭೆ ಮಾಡಲು ಹೇಗೆ ಸಾಧ್ಯ. ನಿಮಗೆ ಈ ಅಧಿಕಾರ ಕೊಟ್ಟವರು ಯಾರು’ ಎಂದು ಪ್ರಶ್ನಿಸಿದ ಅವರು ‘ಭಾರತದ ರಕ್ಷಣಾ ಇಲಾಖೆಯ ಹಾಗೂ ಸೈನಿಕರ ಮನೊಸಾಮರ್ಥ್ಯ ಕುಗ್ಗಿಸುವ ಕೆಲಸವನ್ನು ರಾಹುಲ್ ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
