ಬೆಂಗಳೂರು:
#MeToo ಅಭಿಯಾನದಡಿ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್, ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಇಂದು ತಮ್ಮ ವಕೀಲ ಅನಂತ ನಾಯ್ಕ ಅವರೊಂದಿಗೆ ಬಂದು ಬೆಂಗಳೂರಿನ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಶೃತಿ ಹರಿಹರನ್, ತಮ್ಮ ದೂರಿನ ಪ್ರತಿಯಲ್ಲಿ w/o ರಾಮ್ ಕುಮಾರ್ ಎಂದು ಶೃತಿ ಉಲ್ಲೇಖಿಸಿದ್ದಾರೆ. ಹಾಗಾದರೆ ಯಾರು ಈ ರಾಮ್ ಕುಮಾರ್..? ಶೃತಿ ಹರಿಹರನ್ ಗೆ ಮಧುವೆಯಾಗಿದೆಯಾ..? ಈ ಹಿಂದೆ ತಮ್ಮ ಮಧುವೆಯ ಕುರಿತು ಎಲ್ಲಿಯೂ ಅಧಿಕೃತವಾಗಿ ತಿಳಿಸದ ಶೃತಿ ದೂರಿನ ಪ್ರತಿಯಲ್ಲಿ ಮಾತ್ರ ರಾಮ್ ಕುಮಾರ್ ಹೆಸರನ್ನು ಉಲ್ಲೇಖಿಸಿರುವುದೇಕೆ..? ಎಂಬ ಸಂಶಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ