‘ಅಯೋಧ್ಯಾ ತೀರ್ಪು ಶ್ಲಾಘನೀಯ’ – ಸಿದ್ದಲಿಂಗೇಶ್ವರ ಶ್ರೀ

ತುಮಕೂರು :

      ಬಹಳ ದಿನಗಳ ಸಮಸ್ಯೆಯಾಗಿದ್ದ ಅಯೋಧ್ಯಾ ವಿವಾದಕ್ಕೆ ಅಂತಿಮವಾಗಿ ತೆರೆ ಎಳೆದಿರುವುದು ಶ್ಲಾಘನೀಯ ಎಂದು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗೇಶ್ವರ ಶ್ರೀಗಳು ತಿಳಿಸಿದ್ದಾರೆ.

       ಅಯೋಧ್ಯೆ ತೀರ್ಪಿನ ಕುರಿತು ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗೇಶ್ವರ ಶ್ರೀಗಳು, ಸಂವಿಧಾನದ ಪೀಠ ಸುದೀರ್ಘ ವಿಚಾರಣೆ ಮಾಡಿ, ದಾಖಲೆ ನೋಡಿ ಇತಿಹಾಸ ಸಂಸ್ಕೃತಿ ಗಮನಿಸಿ ತೀರ್ಪು ನೀಡಿದೆ. ಬಹಳ ದಿನಗಳ ಸಮಸ್ಯೆಯಾಗಿದ್ದು ಅಂತಿಮವಾಗಿ ವಿವಾದಕ್ಕೆ ತೆರೆ ಎಳೆದಿರುವುದು ಶ್ಲಾಘನೀಯ ಎಂದಿದ್ದಾರೆ.

     ಇದು ಸೋಲು ಗೆಲುವಿನ ಪ್ರಶ್ನೆ ಅಲ್ಲ, ವಿವಾದ ತೀರ್ಮಾನಾಗಿರುವುದು ಸಂತೋಷದ ಸಂಗತಿ. ನಾವು ನ್ಯಾಯಲಯನ್ನು ಗೌರವಿಸುತ್ತೇವೆ.‌ ಅದು ಪರ ವಿರೋಧ ವಿಚಾರವಲ್ಲ. ನ್ಯಾಯಾಲಯ ಎಲ್ಲವನ್ನು ಗಮನಿಸಿ ಸಂವಿಧಾನದ ಪೂರ್ಣ ಪೀಠ ಇದನ್ನು ಒಪ್ಪಿ ತೀರ್ಮಾನ ಕೊಟ್ಟಿದೆ. ಇದಕ್ಕೆ ಅಪಸ್ವರ ಬರದಂತೆ ಎಲ್ಲವನ್ನು ಸಮಾನವಾಗಿ ಸ್ವೀಕರಿಸಿ, ಗೌರವಿಸಿ ಶಾಂತಿ ಸಮಧಾನದಿಂದ ಇರಬೇಕು‌.‌ ಎಲ್ಲಾ ಧರ್ಮಕ್ಕೂ ಜಾತಿಗೂ ಅವಕಾಶ ನೀಡಿರುವುದು ಭಾರತ. ನಮ್ಮ ದೇಶಕ್ಕೆ, ವಿಶ್ವಕ್ಕೆ ಶಾಂತಿ ಬಯಸುತ್ತದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ಲಾರು ಎತ್ತಿ ಹಿಡಿಯೋಣ, ಸ್ವಾಗತಿಸೋಣ. ಸೌಹಾರ್ದತೆಯಿಂದ ಜೀವನ ನಡೆಸೋಣ. ಇವರು ಪೂಜೆ ಮಾಡ್ತಾರೆ. ಅವರು ಪ್ರಾರ್ಥನೆ ಮಾಡುತ್ತಾರೆ ಅಷ್ಟೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap