ಯಡಿಯೂರಪ್ಪನವರೇ..ನೀವು ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ಕನಸು : ಸಿದ್ದು

ಮಂಡ್ಯ:

        ಯಡಿಯೂರಪ್ಪನವರೇ ನೀವು ಎರಡೂವರೆ ದಿನ ಮುಖ್ಯಮಂತ್ರಿ ಆಗಿದ್ದಿರಿ, ಅಷ್ಟು ಸಾಕಲ್ಲವೇ? ‘ಮತ್ತೊಮ್ಮೆ ನೀವು ಮುಖ್ಯಮಂತ್ರಿಯಾಗುವುದು ಕನಸು. ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

      ಕರ್ನಾಟಕ ಪ್ರದೇಶ ಕುರುಬರ ಸಂಘ ನಗರದಲ್ಲಿ ನಿರ್ಮಿಸಿರುವ ಕನಕ ಭವನ ಕಟ್ಟಡ ಉದ್ಘಾಟಿಸಿ ಭಾನುವಾರ ಮಾತನಾಡಿದ ಅವರು, ‘ಯಡಿಯೂರಪ್ಪ ಅವರೇ ನೀವು ಚುನಾವಣೆಯಲ್ಲಿ 113 ಸ್ಥಾನ ಗೆದ್ದಿಲ್ಲ, ಗಂಭೀರವಾಗಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಿ. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ವ್ಯರ್ಥ ಸಾಹಸಗಳನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಜನ ನಿಮ್ಮನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಹಿಂದಿನ ಬಾಗಿಲಿನ ಮೂಲಕ ಅಧಿಕಾರಕ್ಕೆ ಬರುವ ನಿಮ್ಮ ಯತ್ನ ಸಫಲವಾಗುವುದಿಲ್ಲ. ನಮ್ಮ ಶಾಸಕರಿಗೆ ಕೋಟಿ ಕೋಟಿ ಆಮಿಷ ತೋರಿಸುತ್ತಿದ್ದೀರಿ. ಅಷ್ಟೊಂದು ಹಣ ಎಲ್ಲಿಂದ ತಂದಿರಿ, ಅದಕ್ಕೆಲ್ಲಾ ಲೆಕ್ಕ ಕೊಟ್ಟಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link