ಸಿದ್ದು ಬೆನ್ನಿಗೆ ಹೆಚ್ಡಿಕೆ ಚಾಕು..! : ಈಶ್ವರಪ್ಪ

ಬಾಗಲಕೋಟೆ:

Related image

      ಮಾಜಿ ಪ್ರಧಾನಿ ಎಚ್​.ಡಿ.ದೇವೆಗೌಡರ ಬೆನ್ನಿಗೆ ಸಿದ್ದರಾಮಯ್ಯನವರು ಚಾಕು ಹಿಡಿದು ನಿಂತಿದ್ದಾರೆ, ಸಿದ್ದರಾಮಯ್ಯ ಬೆನ್ನಿಗೆ ಕುಮಾರಸ್ವಾಮಿ ಚಾಕು ಹಿಡಿದುಕೊಂಡಿದ್ದಾರೆ. ಹೀಗಾಗಿ ಬ್ರಹ್ಮ ಬಂದರೂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲ್ಲ ಎಂದು ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. 

      ಚುನಾವಣಾ ಪ್ರಚಾರದ ವೇಳೆ ಮಾತನಾಡಿ,ಕಾಂಗ್ರೆಸ್, ಜೆಡಿಎಸ್ ಮುಳುಗಿ ಹೋಗುವ ಹಡಗು. ಈಗ ಒಬ್ಬರನ್ನೊಬ್ಬರು ಬಾಚ್ಕೊಂಡು ತಬ್ಬಿಕೊಂಡಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಮೈತ್ರಿ ಸರ್ಕಾರ ಬಿದ್ದು ಹೋಗಿ, ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ