ಹುಬ್ಬಳ್ಳಿ :
ಉಪಚುನಾವಣೆ ನಂತರ ಹೆಚ್ಚು ಸ್ಥಾನ ಬಂದರೆ ಸರ್ಕಾರ ರಚಿಸುತ್ತೇವೆ, ಜೆಡಿಎಸ್ ನೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳಲ್ಲ ಎಂದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಇಂದು ಉಪಚುನಾವಣೆ ನಡೆದಿದೆ, ಜನ ಯಾವ ತೀರ್ಪು ನೀಡಲಿದ್ದಾರೆ ನೋಡೋಣ. ಫಲಿತಾಂಶದ ಬಳಿಕ ಬಹುಮತ ಬಂದರೆ ಸರ್ಕಾರ ರಚಿಸುತ್ತೇವೆ ಎಂದು ಹೇಳಿದ್ದೇನೆ ಅಷ್ಟೇ. ಸದ್ಯಕ್ಕೆ ಜೆಡಿಎಸ್ ನೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ನನಗೆ ಸಿಎಂ ಆಗುವ ಹುಚ್ಚು ಹಿಡಿದಿದೆ’ ಎಂದು ಕೆ.ಎಸ್.ಈಶ್ವರಪ್ಪ ಹೋದಲೆಲ್ಲ ಹೇಳುತ್ತಿದ್ದಾರೆ. ‘ನಾನು ಯಾವಾಗ ಆ ಮಾತು ಹೇಳಿದ್ದೇನೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ