ಶ್ರೀಗಳು ಚಿಕಿತ್ಸೆ ಪಡೆದ ಕೊಠಡಿ ಈಗ ಸ್ಮಾರಕ!!!

  

      ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ತಮ್ಮ ಅನಾರೋಗ್ಯದ ದಿವಸದಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಆಸ್ಪತ್ರೆಯ ಕೊಠಡಿ ಇನ್ನು ಮುಂದೆ ಸ್ಮಾರಕವಾಗಿ ರೂಪ ಪಡೆಯಲಿದೆ.

Tumkur Siddaganga Hospital releases Shivakumara Swami health bulletin
      ಆಸ್ಪತ್ರೆಯ ಮೂರನೇ ಅಂತಸ್ತಿನಲ್ಲಿರುವ ಈ ಕೊಠಡಿಯಲ್ಲಿ ಅವರ ಭಾವಚಿತ್ರವನ್ನಿಟ್ಟು ದೀಪ ಹಚ್ಚಿ ಪ್ರತಿದಿನ ಪೂಜೆ ಸಲ್ಲಿಸಲಾಗುತ್ತಿದೆ. ಚಿಕಿತ್ಸೆ ಸಂದರ್ಭದಲ್ಲಿ ನಿರಂತರ ಮೊಳಗುತ್ತಿದ್ದ ಶಿವಸ್ತುತಿ ಇಂದಿಗೂ ಮುಂದುವರಿದಿದೆ. ಇನ್ನೊಂದೆಡೆ ಅವರು ಚಿಕಿತ್ಸೆ ಪಡೆದ ಐಸಿಯು ಯೂನಿಟ್ ಅನ್ನು ಕೂಡ ಸಂರಕ್ಷಿಸಿಡಲಾಗುತ್ತಿದೆ.
      ಆಸ್ಪತ್ರೆಯಿಂದ ಮಠಕ್ಕೆ ಕರೆದುಕೊಂಡು ಹೋಗುವ ಮುನ್ನ 12 ದಿನಗಳ ಕಾಲ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಈ ಒಂದು ನೆನಪಿಗೋಸ್ಕರ ಆಸ್ಪತ್ರೆ ಸಿಬ್ಬಂದಿ, ಆಡಳಿತ ಮಂಡಳಿ ಹಾಗೂ ವೈದ್ಯರು ಕೊಠಡಿಯನ್ನು ಸಂರಕ್ಷಿಸಿಡಲು ಮುಂದಾಗಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap