ಶಿರಾ :  38 ಮಂದಿ ಕೊರೋನಾ ಸೋಂಕಿತರಿಂದಲೂ ಮತದಾನ!!

ಶಿರಾ : 

     ಶಿರಾ ಉಪ ಚುನಾವಣೆ ಸಂಬಂಧವಾಗಿ ನ:3 ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ತಾಲ್ಲೂಕಿನಲ್ಲಿದ್ದ 71 ಮಂದಿ ಕೊರೋನಾ ಸೋಂಕಿತರ ಪೈಕಿ 38 ಮಂದಿ ಸೋಂಕಿತರಿಗೂ ಮತದಾನ ಮಾಡಲು ಅವಕಾಶ ನೀಡಲಾಗಿದ್ದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳೊಂದಿಗೆ ಸೋಂಕಿತರನ್ನು ಮತಗಟ್ಟೆಗೆ ಕರೆ ತಂದ ಆರೋಗ್ಯ ಇಲಾಖೆಯು ಯಶಸ್ವಿಯಾಗಿ ಮತ ಚಲಾಯಿಸಲು ಅವಕಾಶ ನೀಡಿತು.

      ಸಂಜೆ 5 ಗಂಟೆಯ ನಂತರ ನಗರದ ಸರ್ಕಾರಿ ಸಂಯುಕ್ತ ಪ್ರೌಢಶಾಲಾ ಮತಗಟ್ಟೆ, ಸರ್ಕಾರಿ ಉರ್ದು ಶಾಲೆಯ ಮತಗಟ್ಟೆ, ತಾಲ್ಲೂಕಿನ ಬರಗೂರು, ಯಾದಲಡಕು ಸೇರಿದಂತೆ ತಾಲ್ಲೂಕಿನ ವಿವಿಧ ಮತಗಟ್ಟೆಗಳಲ್ಲಿ ಸೋಂಕಿತರಿಗೂ ಮತದಾನದ ವ್ಯವಸ್ಥೆ ಮಾಡಲಾಗಿತ್ತು

      ಸಂಕಿತರನ್ನು ಮತಗಟ್ಟೆಗೆ ಕರೆ ಅಂಬುಲೆನ್ಸ್‍ನಲ್ಲಿ ಕರೆದ ಆರೋಗ್ಯ ಇಲಾಖೆ ಮತದಾನದ ನಂತರ ಮತ್ತೆ ಅವರನ್ನು ಕರೆ ತಂದ ಸ್ಥಳಗಳಿಗೆ ಕರೆದೊಯ್ಯಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap