ಶಿರಾ:
ಮದ್ಯದಂಗಡಿಯ ಸಮೀಪ ಒಂದರಲ್ಲಿ ಇದ್ದ ಕಿರಾಣಿ ಅಂಗಡಿಗೆ ಸಾಲ ಕೇಳಲು ಹೋಗಿದ್ದ ವ್ಯಕ್ತಿಯೋರ್ವನು ಅಂಗಡಿಯ ಮಾಲೀಕ ಸಾಲ ಕೊಡಲಿಲ್ಲ ಎಂಬ ಕಾರಣಕ್ಕೆ ಮಚ್ಚಿನಿಂದ ತಲೆಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿರಾ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ 9 ಗಂಟೆ ಸಮಯದಲ್ಲಿ ನಡೆದಿದೆ.
ಶಿರಾ ತಾಲೂಕು ತಾವರೆಕೆರೆಯ ಎಂಎಸ್ಐಎಲ್ ಮದ್ಯದಂಗಡಿಯ ಮುಂದೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಘಟನೆಯಾಗಿದೆ.
ತಾವರೆಕೆರೆ ಗ್ರಾಮದ ಎಂಎಸ್‍ಐಎಲ್ ಮದ್ಯದಂಗಡಿಯ ಸಮೀಪದಲ್ಲಿ ತಿಂಡಿತಿನಿಸುಗಳನ್ನು ಮಾರಾಟ ಮಾಡುತ್ತಿದ್ದ 25 ವರ್ಷದ ಮಾರನಗೆರೆ ಗೊಲ್ಲರಹಟ್ಟಿಯ ಮುರುಳಿ ಎಂಬಾತನ ಅಂಗಡಿಗೆ ತಿನಿಸುಗಳನ್ನು ಸಾಲವಾಗಿ ಕೊಡುವಂತೆ ತಾವರೆಕೆರೆ ಗ್ರಾಮದ ಆಟೋಚಾಲಕ ವಿನಯ್ ಎಂಬಾತ ಕೇಳಿದ್ದಾನೆ. ಆದರೆ, ಸಾಲವನ್ನು ಕೊಡಲು ಒಪ್ಪದ ಮುರುಳಿಯ ಮೇಲೆ ವಿನಯ್ ಎಂಬ ಆರೋಪಿ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ವಿನಯ್ ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
