ಪ್ಲಾಸ್ಟಿಕ್ ಕವರಿನಲ್ಲಿ ತಲೆಬುರುಡೆ, ಕೈ-ಕಾಲು ಪತ್ತೆ !!

ಬೆಂಗಳೂರು: 

      ಪ್ಲಾಸ್ಟಿಕ್ ಕವರಿನಲ್ಲಿ ಸತ್ತ ಮನುಷ್ಯನ ಅಸ್ಥಿಪಂಜರ ಪತ್ತೆಯಾಗಿ ನಗರದ ಜನರನ್ನು ಭಯಭೀತರನ್ನಾಗಿಸಿರುವ ಘಟನೆ ನೆಲಮಂಗಲದ ನಗರದಲ್ಲಿ ನಡೆದಿದೆ. 

       ಪ್ಲಾಸ್ಟಿಕ್ ಕವರ್ ನಲ್ಲಿ ಮಾನವನ ತಲೆ ಬುರುಡೆ, ಕೈ-ಕಾಲು ಖಾಸಗಿ ನಿವೇಶನದಲ್ಲಿ ಪತ್ತೆಯಾಗಿದ್ದು, ಇದನ್ನು ಮಾಟಮಂತ್ರಕ್ಕೆ ಬಳಸಿರುವ ಶಂಕೆ ವ್ಯಕ್ತವಾಗಿದೆ. ಸುತ್ತಮುತ್ತಲಿನ ಜನರಲ್ಲಿ ಆತಂಕ ಮೂಡಿಸಿದೆ.

      ಯಾರೋ ದುಷ್ಕರ್ಮಿಗಳು ವಾಮಚಾರಕ್ಕೆ ಬಳಸಲು ಹೂತಿಟ್ಟಿದ್ದ ಮೃತ ದೇಹದ ಅಸ್ಥಿಪಂಜರವನ್ನ ಹೊರತೆಗೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನು ಕಂಡ ಜನರು ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

      ಮಾಹಿತಿ ನೀಡಿದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲವೆಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link