ದಾವಣಗೆರೆ:
ಟ್ರ್ಯಾಕ್ಟರ್‍ನಿಂದ ಕೆಳಗೆ ಬಿದ್ದ ಯುವಕನೋರ್ವ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಉತ್ತರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದಾವಣಗೆರೆಯ ನಿಟುವಳ್ಳಿ ಎ.ಕೆ. ಕಾಲೊನಿಯ ನಿವಾಸಿ ಹಾಲೇಶ್ (24) ಮೃತ ಯುವಕನಾಗಿದ್ದಾನೆ. ನಿಟುವಳ್ಳಿ ಪರಶುರಾಮ ಎಂಬವರು ಟ್ರ್ಯಾಕ್ಟರ್ ಚಾಲಕನಾಗಿದ್ದು, ಅವರ ಜತೆಗೆ ಕೆಲಸ ಮಾಡಲು ಹಾಲೇಶ್ ತೆರಳಿದ್ದರು. ಭಾನುವಾರ ರಾತ್ರಿ ಆವರಗೆರೆ ಬಳಿ ಕಸ ಅನ್‍ಲೋಡ್ ಮಾಡಿ ಪಿ.ಬಿ.ರೋಡ್‍ನಲ್ಲಿ ವಾಪಸ್ಸಾಗುತ್ತಿದ್ದಾಗ ಆವರಗೆರೆ ಮೊದಲ ಬಸ್ ತಂಗುದಾಣ ಬಳಿ ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಟ್ರ್ಯಾಕ್ಟರ್‍ನ ಎಂಜಿನ್ ಮಡ್‍ಗಾರ್ಡ್ ಮೇಲೆ ಕುಳಿತಿದ್ದ ಹಾಲೇಶ್ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.
ಅವರನ್ನು ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಈ ಕುರಿತು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








