ಕಾಂಗ್ರೆಸ್ ತೊರೆಯಲು ಕಾರಣ ಬಿಚ್ಚಿಟ್ಟ SM ಕೃಷ್ಣ!!

ಮಂಡ್ಯ:

     ಕೇಂದ್ರ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ. ಕೃಷ್ಣ ಅವರು 2012ರಲ್ಲಿ ರಾಜೀನಾಮೆ ನೀಡಿ ನಂತರ ಕಾಂಗ್ರೆಸ್ ಪಕ್ಷ ತೊರೆದು 2017 ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಕಾರಣವನ್ನು ತಿಳಿಸಿದ್ದಾರೆ.

      ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ 80 ವರ್ಷ ವಯಸ್ಸಾದವರಿಗೆ ಮಂತ್ರಿಗಿರಿ ಇಲ್ಲ ಎಂದು ಫರ್ಮಾನು ಹೊರಡಿಸಿದರು. ಅದನ್ನು ನೋಡಿ ಬೇಸರವಾಗಿ ಅಂದೇ ನಾನು ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದೆ” ಎಂದು ತಾವು ಕಾಂಗ್ರೆಸ್ ನಿಂದ ಹೊರ ಬಂದ ಕಾರಣವನ್ನು ಎಸ್.ಎಂ.ಕೃಷ್ಣ ಬಿಚ್ಚಿಟ್ಟಿದ್ದಾರೆ. 

     ಏನೂ ಅಧಿಕಾರ ಇಲ್ಲದಿದ್ದರೂ ಆಡಳಿತದ ವಿಷಯದಲ್ಲಿ ರಾಹುಲ್ ಆದೇಶ ಹೊರಡಿಸುತ್ತಿದ್ದರು. ಇದರಿಂದ ನಮ್ಮ ಜೊತೆಗಾರರು ಆಡಳಿತದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಆಗಲೇ ಹಗರಣಗಳು ಹೆಚ್ಚಾದವು. ಕಾಮನ್​ವೆಲ್ತ್, 2ಜಿ, ಕಲ್ಲಿದ್ದಲು ಇತ್ಯಾದಿ ಹಗರಣಗಳು ನಡೆದವು ಎಂದು ಟೀಕಿಸಿದ್ದಾರೆ. 

      ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರಧಾನಮಂತ್ರಿ ಮನಮೋಹನ್ ಸಿಂಗ್‌ ಜಾರಿಗೆ ತರಲು ನಿರ್ಧರಿಸಿದ್ದ ಮಸೂದೆಯನ್ನು ರಾಹುಲ್ ಹರಿದು ಹಾಕಿದರು. ಪ್ರಧಾನಿಗೆ ಗೊತ್ತಿಲ್ಲದಂತೆ ಹಲವು ವಿಚಾರಗಳು ನಡೆಯುತ್ತಿದ್ದವು. ಎಲ್ಲೋ ಕುಳಿತಿದ್ದ ರಾಹುಲ್ ಆಡಳಿತದಲ್ಲಿ ಹಸ್ತಕ್ಷೇಪ ಹೆಚ್ಚಿತ್ತು. ಎಲ್ಲವೂ ಕೂಡ ಎಕ್ಸ್​ಟ್ರಾ ಕಾನ್ಸ್​ಸ್ಟಿಟ್ಯೂಟ್ ಬಾಡಿಯ ಅಂಗವಾಗಿದ್ದ ರಾಹುಲ್ ಗಾಂಧಿ ಅವರ ಕೈಯಲ್ಲೇ ಇತ್ತು ಎಂದು ಆರೋಪಿಸಿದ್ದಾರೆ. 

      ನರೇಂದ್ರ ಮೋದಿ 5 ವರ್ಷದಲ್ಲಿ ಭ್ರಷ್ಟಾಚಾರ ಮುಕ್ತ, ಉತ್ತಮ ಆಡಳಿತ ನೀಡಿದ್ದಾರೆ ಎಂದು ಪ್ರಧಾನಿಯ ಆಡಳಿತ ವೈಖರಿಯನ್ನು ಎಸ್.ಎಂ.ಕೃಷ್ಣ ಹೊಗಳಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap