ಬಾಗಲಕೋಟ:
ಯುವಕನೊಬ್ಬ ತಂದೆಯ ಜತೆ ರೈಲು ಗೇಟು ದಾಟುವಾಗ ಬರುತ್ತಿದ್ದ ರೈಲಿಗೆ ದಿಢೀರ್‌ನೆ ತಲೆಕೊಟ್ಟು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ.
ತಾಲೂಕಿನ ಗುಳಬಾಳ ತಾಂಡಾದ ನಿವಾಸಿ ಪರಶುರಾಮ್ ರಾಠೋಡ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಪರಶುರಾಮ್ ಬಾಗಲಕೋಟೆಯ ಹೆಸ್ಕಾಂನಲ್ಲಿ ಲೈನ್‍ಮನ್ ಆಗಿ ಕೆಲಸ ಮಾಡುತ್ತಿದ್ದ. ತಮ್ಮ ಮುಂದೆಯೇ ಮಗ ಆತ್ಮಹತ್ಯೆ ಶರಣಾಗಿದ್ದಕ್ಕೆ ತಂದೆ ಕಣ್ಣೀರಿಟ್ಟಿದ್ದಾರೆ.
ಘಟನೆಯಲ್ಲಿ ಯುವಕ ರುಂಡ-ಮುಂಡ ಬೇರ್ಪಟ್ಟಿದೆ. ಘಟನೆ ನಡೆದ ಸ್ಥಳದಲ್ಲಿ ಯುವಕನ ತಂದೆಯ ಆಕ್ರಂದನ ಮುಗಿಲು ಮುಟ್ಟಿದೆ. ಬಾಗಲಕೋಟೆ ಶಹರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
